ಗೋವಾದಲ್ಲಿ ವಾಹನ ಅಪಘಾತ: ನೀರ್ಚಾಲಿನ ಎಂಬಿಎ ವಿದ್ಯಾರ್ಥಿ ಮೃತ್ಯು
ನೀರ್ಚಾಲು: ಗೋವಾದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ನೀರ್ಚಾಲು ಬಳಿಯ ಮಲ್ಲಡ್ಕ ನಿವಾಸಿ ವಿದ್ಯಾರ್ಥಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮಲ್ಲಡ್ಕ ನಿವಾಸಿ ನಿವೃತ್ತ ಶಿಕ್ಷಕ ವೀರೇಶ್ವರ ಕರ್ಮಲ್ಕರ್ ಎಂಬವರ ಪುತ್ರ ಪ್ರಜ್ವಲ್ ಕರ್ಮಲ್ಕರ್ (೨೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಗೋವಾದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು. ಕಳೆದ ಸೋಮವಾರ ಇವರು ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ತಂದೆ, ತಾಯಿ ಅನ್ನಪೂರ್ಣೇಶ್ವರಿ (ಶಿಕ್ಷಕಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.