24 ಮಹಿಳೆಯರು ಸೇರಿದ ತಂಡದಿಂದ 29.39 ಕಿಲೋ ಚಿನ್ನ ವಶ

ಮುಂಬಯಿ: 24 ಮಹಿಳೆಯರು ಸೇರಿದ ತಂಡ ಸಾಗಿಸುತ್ತಿದ್ದ 29.39 ಕಿಲೋ ಚಿನ್ನಾಭರಣವನ್ನು ರೆವೆನ್ಯೂ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಮುಂಬಯಿ ವಿಮಾನ ನಿಲ್ದಾಣ ದಿಂದ ವಶಪಡಿಸಿದೆ. ಸೆರೆ ಹಿಡಿದ ಚಿನ್ನಕ್ಕೆ 37.74 ಕೋಟಿ ರೂ. ಮೌಲ್ಯ ಅಂದಾಜಿಸಲಾಗಿದೆ. ಡಿಆರ್‌ಐ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವರ್ಷ ಮುಂಬಯಿ ವಿಮಾನ ನಿಲ್ದಾಣ ದಲ್ಲಿ ನಡೆಸಿದ ಅತ್ಯಂತ ದೊಡ್ಡ ಚಿನ್ನ ಬೇಟೆಯಾಗಿದೆ ಇದು. ಕೆನಿಯಾದ ನೈರೋ ಬಿಯಿಂದ ಮಹಿಳೆಯರ ತಂಡವೊಂದು ಚಿನ್ನಾಭರಣದೊಂದಿಗೆ ಮುಂ ಬಯಿ ಛತ್ರಪತಿ ಶಿವಜಿ ಮಹಾ ರಾಜ್ …

ಪುತ್ರಿಗೆ ದೌರ್ಜನ್ಯಗೈದ ತಂದೆ ವಿರುದ್ಧ ಪೋಕ್ಸೋ: ಕಸ್ಟಡಿಗೆ

ಮಂಜೇಶ್ವರ: ಪುತ್ರಿಗೆ ದೌರ್ಜನ್ಯಗೈದಿರುವುದಾಗಿ ನೀಡಿದ ದೂರಿನಂತೆ ತಂದೆಯನ್ನು ಮಂಜೇ ಶ್ವರ ಪೊಲೀಸರು ಕಸ್ಟಡಿಗೆ ತೆಗೆದರು. 53ರ ಹರೆಯದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆಯಲಾಗಿದೆ. ಪ್ಲಸ್ ಟುನಲ್ಲಿ ಕಲಿಯುವ ಸಮಯದಲ್ಲಿಯೇ ತನ್ನನ್ನು ದೌರ್ಜನ್ಯಗೈದಿರುವುದಾಗಿ ಯುವತಿ ಹೇಳಿಕೆ ನೀಡಿದ್ದಾಳೆ. ಈಗ ಈಕೆಗೆ 20 ವರ್ಷವಾಗಿದೆ. ಹೆದರಿಕೆಯಿಂ ದಾಗಿ ಈ ಬಗ್ಗೆ ಈಕೆ ಯಾರಲ್ಲೂ ತಿಳಿಸಿರಲಿಲ್ಲವೆಂದು ಹೇಳಲಾಗುತ್ತಿದೆ. ಇತ್ತೀಚೆಗಿನಿಂದ ಇನ್ನಷ್ಟು ಹೆಚ್ಚು ಉಪಟಳ ಮಾಡಲು ಆರಂಭಿಸಿ ರುವುದರೊಂದಿಗೆ ಈ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಆ ಬಳಿಕ ತಾಯಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.

ಪಯ್ಯನ್ನೂರಿನಲ್ಲಿ ಮುಂದುವರಿಯುತ್ತಿರುವ ಆಕ್ರಮಣ : ಕಾರಿಗೆ, ಕೃಷಿ ಸ್ಥಳದಲ್ಲಿ ಕಿಚ್ಚಿರಿಸಿ ನಾಶ

ಹೊಸದುರ್ಗ: ವಿಧಾನಸಭಾ ಚುನಾವಣೆ ಪೂರ್ತಿಯಾದ ಬೆನ್ನಲ್ಲೇ ಪಯ್ಯನ್ನೂರು ವಿಧಾನಸಭಾ ಮಂಡಲದ ವಿವಿಧ ಭಾಗಗಳಲ್ಲಿ ಆಕ್ರಮಣಗಳು ಮುಂದುವರಿಯುತ್ತಿದೆ. ಯುಡಿಎಫ್ ಸ್ವತಂತ್ರನಾಗಿ ಸ್ಪರ್ಧಿಸಿದ ವಿ. ಕುಂಞಿ ಕೃಷ್ಣನ್‌ರ ಬೆಂಬಲಿಗನೆಂದು ಹೇಳಲಾ ಗುವ ಎರಮಂ ಪೇರೂಲ್‌ನ ಎಂ.ಕೆ. ನಾರಾಯಣನ್‌ರ ಕಾರಿಗೆ ಬೆಂಕಿ ಹಚ್ಚ ಲಾಗಿದೆ. ಇಂದು ಮುಂಜಾನೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಅಕ್ರಮಿ ಗಳು ಪರಾರಿಯಾಗಿದ್ದಾರೆ. ಪಂಚಾ ಯತ್ ನೌಕರನಾದ ನಾರಾಯಣನ್ ಎನ್‌ಜಿಒ ಯೂನಿಯನ್ ಕಾರ್ಯ ಕರ್ತರಾಗಿದ್ದಾರೆ. ಕುಂಞಿಕೃಷ್ಣನ್ ಎತ್ತಿಹಿಡಿದ ಹುತಾತ್ಮ ಫಂಡ್‌ಗೆ ಸಂಬಂಧಿಸಿದ ಆರೋಪವನ್ನು …

ಟೈಲರ್ ನಿಧನ

ಕುಂಬಳೆ: ಭಾಸ್ಕರನಗರ ಸಮೀಪದ ಕಾರಿಪ್ಪಾಡಿ ನಿವಾಸಿ ಚಂದ್ರಶೇಖರ (57) ನಿಧನ ಹೊಂದಿದರು. ಉಪ್ಪಳ ಹಾಗೂ ಕುಂಬಳೆಯಲ್ಲಿ ಟೈಲರ್ ಆಗಿ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ಪುಷ್ಪಲತ, ಮಕ್ಕಳಾದ ಜೀವನ್, ಸಂಧ್ಯಾ, ಸಹೋದರರಾದ ವಿಶ್ವನಾಥ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆರು ವರ್ಷದ ಪುತ್ರನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆ: ಪ್ರಿಯತಮನ ಜೊತೆ ಪರಾರಿಯಾಗಲು ನಡೆಸಿದ ಸಿದ್ಧತೆ ಮಧ್ಯೆ ಯುವತಿ ಪೊಲೀಸರ ವಶಕ್ಕೆ

ಪುಣೆ: ಪ್ರಿಯತಮನ ಜೊತೆ ಜೀವಿಸಲೆಂದು ತಾಯಿ 6 ವರ್ಷದ ಮಗನನ್ನು ಪ್ರಿಯತಮನ ಸಹಾಂi ದೊಂದಿಗೆ ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ. ಬಕೆಟ್‌ನಿಂದ ಹೊರ ತೆಗೆದು ಮಗು ಮೃತಪಟ್ಟಿದೆಯೇ ಎಂಬುದನ್ನು ಖಚಿತಪಡಿಸಲು ಮೃತದೇಹವನ್ನು ನೆಲಕ್ಕೆ ಬಡಿದಿರುವುದಾಗಿಯೂ ಹೇಳಲಾಗುತ್ತಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡಿ ಎಂಬಲ್ಲಿ ಈ ದಾರುಣ ಘಟನೆ ಸಂಭವಿಸಿದೆ.  ಕೊಲೆಗೈದ ಮರುದಿನ ತಾಯಿ ಬಾಸಿರನ್ ಮೆಹಬೂಬ್ ಶೇಕ್ (27) ಮಗುವಿನ ಮೃತದೇಹವನ್ನು ತನ್ನ ಕುಟುಂಬ ಮನೆಗೆ ಕೊಂಡೊಯ್ದಿದ್ದಳು. ಹೃದಯಾಘಾv ದಿಂದ ಪುತ್ರ ಮೃತಪಟ್ಟಿರುವುದಾಗಿ ತಾಯಿ …

ಮೊನಾಲಿಸ ಅಪ್ರಾಪ್ತೆ: ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸು

ತಿರುವನಂತಪುರ: ಕುಂಭ ಮೇಳಕ್ಕೆ ಸಂಬಂಧಿಸಿ ದೇಶದೆಲ್ಲೆಡೆ ಗಮನ ಸೆಳೆದು ಕೊನೆಗೆ ತಿರುವನಂತಪುರಕ್ಕೆ ತಲುಪಿ ಸಿಪಿಎಂ, ಪೋಪ್ಯುಲರ್ ಫ್ರಂಟ್ ಮುಖಂಡರ ಸಹಾಯದಲ್ಲಿ ವಿವಾಹವಾದ ಮೊನಾಲಿಸಳಿಗೆ ಪ್ರಾಯಪೂರ್ತಿಯಾಗಿಲ್ಲವೆಂದು ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ವಿವಾಹ ನಡೆಸಿದವರ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. 2009 ದಶಂಬರ್ 30ರಂದು ಮೊನಾಲಿಸ ಜನಿಸಿರುವುದಾಗಿ ಪತ್ತೆಹಚ್ಚಲಾಗಿದೆ. ಪೋಕ್ಸೋ, ಭಾರತೀಯ ನ್ಯಾಯಸಂಹಿತೆ, ಪರಿಶಿಷ್ಟ ಜಾತಿಯವರ ವಿರುದ್ಧ ಅಕ್ರಮ ತಡೆಯುವ ಕಾಯ್ದೆ ಎಂಬಿವು ಪ್ರಕಾರ ಕೇಸು ದಾಖಲಿಸಲಾಗಿದೆ. ಫರ್ದಿ ವನವಾಸಿ ಸಮಾಜಕ್ಕೊಳಪಟ್ಟ ಮೊನಾಲಿಸ …

ಚಟ್ಟಂಚಾಲ್- ಚೆರ್ಕಳ ರಾಷ್ಟ್ರೀಯ ಹೆದ್ದಾರಿ ಇಂದಿನಿಂದ 2 ವಾರ ಮುಚ್ಚುಗಡೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುವ ನಿರ್ಮಾಣ ಕಾಮಗಾರಿಗಳಂಗವಾಗಿ ತೆಕ್ಕಿಲ್, ಬೇವಿಂಜ ಭಾಗಗಳಲ್ಲಿ ರಸ್ತೆಯಲ್ಲಿ ಹೊಂಡ ತೆಗೆಯುವುದರ ಹಿನ್ನೆಲೆಯಲ್ಲಿ ಇಂದಿನಿಂದ 2 ವಾರ ಸಂಚಾರ ನಿಷೇಧಿಸಲಾಗಿದೆ. ಕಣ್ಣೂರು ಭಾಗದಿಂದ ಆಗಮಿಸುವ ವಾಹನಗಳು ಕಾಞಂಗಾಡ್ ಸೌತ್‌ನಿಂದ ಕೆಎಸ್‌ಟಿಪಿ ರಸ್ತೆ ಮೂಲಕವೂ, ಪೆರಿಯ ಪೊಯಿನಾಚಿ ಕಡೆಯಿಂದ ಬರುವ ವಾಹನಗಳು ಚಟ್ಟಂಚಾಲ್ ಮಲ್ಸೇತುವೆಯನ್ನು ಪ್ರವೇಶಿಸದೆ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಚಟ್ಟಂಚಾಲ್- ಪರವನಡ್ಕ ದೇಳಿ ರಸ್ತೆ ಮೂಲಕ ಕೆಎಸ್‌ಟಿಪಿ ರಸ್ತೆಗೆ ಪ್ರವೇಶಿಸಿ ಮುಂದುವರಿಯಬೇಕಾಗಿದೆ. ಮಂಗಳೂರು ಭಾಗದಿಂದ ಕಣ್ಣೂರು ಭಾಗಕ್ಕೆ ತೆರಳುವ ವಾಹನಗಳು ಕಾಸರಗೋಡು …

ಉದ್ಯಾವರ ಮಾಡ ಕ್ಷೇತ್ರದ ಉತ್ಸವ ದಿನಾಂಕ ನಿಗದಿ ಮಾಡುವ ‘ಕುದಿಕಳ’ ಸಂಪನ್ನ

ಮಂಜೇಶ್ವರ: ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದ ಮಹೋತ್ಸವ ದಿನಾಂಕ ನಿಗದಿ ಸಮಾರಂಭ ಕುದಿಕಳ ಎಂಬ ಹೆಸರಲ್ಲಿ ಸಂಪ್ರದಾಯ ಪ್ರಕಾರ ನಡೆಯಿತು. ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬರಿಂದ ದೈವಪಾತ್ರಿಗಳು ವೀಳ್ಯದೆಲೆ ಮತ್ತು ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ಇದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಉದ್ಯಾವರ ಸಾವಿರ ಜಮಾಯತ್ ಸದಸ್ಯರು ಮತ್ತು ದೇವಸ್ಥಾನದ ಬ್ರಹ್ಮಸಭೆ ಎರಡು ಕಡೆಗಳಲ್ಲಿ ಕುಳಿತು ಸಮಾರಂಭದ ದಿನಾಂಕ ನಿಗದಿಪಡಿಸಿದರು. ಬಳಿಕ ಸಂಪ್ರದಾಯದಂತೆ ತೆಂಗಿನಕಾಯಿ, ವೀಳ್ಯದೆಲೆ ಮಾರಾಟ …

ಕುಟುಂಬಶ್ರೀಯ ಚುನಾವಣೆ ಕಫೆ : 20 ಲಕ್ಷ ರೂ.ಗೂ ಹೆಚ್ಚಿನ ಆದಾಯ

ಕಾಸರಗೋಡು: ವಿಧಾನಸಭಾ ಚುನಾವಣೆಯ ಬ್ಯುಸಿಯ ಮಧ್ಯೆ ಪೋಲಿಂಗ್ ಅಧಿಕಾರಿಗಳಿಗೆ ಹಾಗೂ ಭದ್ರತಾ ಅಧಿಕಾರಿಗಳಿಗೆ ಕುಟುಂಬಶ್ರೀ ವಿತರಿಸಿದ ಆಹಾರ ಮೂಲಕ 20,69,412 ರೂ.ಗಳ ಆದಾಯ ಗಳಿಸಿದೆ. ಸೂಕ್ತವಾದ ಆಯೋಜನೆಯ ಮೂಲಕ ನಡೆಸಿದ ಈ ಕಾರ್ಯ ಜಿಲ್ಲೆಯ ಮಹಿಳಾ ಒಕ್ಕೂಟದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಚುನಾವಣೆ ದಿನಾಂಕ ಘೋಷಿಸಿದ ಬೆನ್ನಲ್ಲೇ ವಿಪುಲವಾದ ಸಿದ್ಧತೆಗಳನ್ನು ಜಿಲ್ಲಾ ಮಿಷನ್ ನೇತೃತ್ವದಲ್ಲಿ ಆರಂಭಿಸಲಾಗಿತ್ತು. ಜಿಲ್ಲೆಯಾದ್ಯಂತವಿರುವ 324 ಕಫೆ ಘಟಕಗಳನ್ನು ಆಹಾರ ವಿತರಣೆಗಾಗಿ ಸಿದ್ಧಗೊಳಿಸಲಾಗಿತ್ತು. ಅಧಿಕಾರಿಗಳಿಗೆ ಅಗತ್ಯವಾದ ಉಪಹಾರ, ಮಧ್ಯಾಹ್ನ ದೂಟ, ಚಹಾ ಎಂಬಿವು ಯಾವುದೇ …

ಕುರುಮುಜ್ಜಿಕಟ್ಟೆ ಭಜನಾಮಂದಿರದಲ್ಲಿ ಭಾಗವತ ಸಪ್ತಾಹಕ್ಕೆ ಚಾಲನೆ: ಅಗಲ್ಪಾಡಿಯಿಂದ ಹಸಿರುವಾಣಿ ಹೊರೆಕಾಣಿಕೆ

ಕುಂಬ್ಡಾಜೆ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನಿನ್ನೆಯಿಂದ ಆರಂಭಗೊಂಡ ಶ್ರೀಮದ್ಭಾಗವತ ಸಪ್ತಾಹದಂಗವಾಗಿ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಹಸಿರು ವಾಣಿ ಹೊರೆಕಾಣಿಕೆ ಸಮರ್ಪಿಸ ಲಾಯಿತು. ಶ್ರೀಮದ್ಭಾಗವತ ಸಪ್ತಾಹ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ದೀಪ ಬೆಳಗಿಸಿದರು. ಸಂಚಾಲಕ ಶ್ರೀಕೃಷ್ಣ ಭಟ್ ಬಳಕ, ಕೋಶಾ ಧಿಕಾರಿ ಕೃಷ್ಣ ಮಣಿಯಾಣಿ ಅಗಲ್ಪಾಡಿ, ಗೋಪಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಜಯನಗರ, ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ಕೆ.ವಿ. ರಮೇಶ ಶರ್ಮ, ಭಜನಾ ಸಮಿತಿ ಅಧ್ಯಕ್ಷ ರಾಧಾ …