ಕೂಟಮಹಾಜಗತ್ತು ಮಂಗಲ್ಪಾಡಿ ಅಂಗಸಂಸ್ಥೆ, ಯುವ ವೇದಿಕೆಯ ಯುವಶಕ್ತಿ ಸಂಭ್ರಮ

ಉಪ್ಪಳ :ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸ೦ಸ್ಥೆ ಇದರ ಮಹಿಳಾ ವೇದಿಕೆ ಹಾಗೂ ಯುವ ವೇದಿಕೆಯ ಕೂಟ ಯುವಶಕ್ತಿ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ಐಲ ಶ್ರೀ ದುರ್ಗಾ ಪರಮೇಶ್ವರಿ ಕಲಾ ಭವನದಲ್ಲಿ ನಡೆಯಿತು. ಬೆಳಗ್ಗೆ ವೇದಮೂರ್ತಿ ಅಶೋಕ ನಾವಡರ ಪೌರೋಹಿತ್ಯದಲ್ಲಿ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊ೦ಡಿತು. ಬಳಿಕ ಪುಟಾಣಿಗಳ ರಾಧಾ ಕೃಷ್ಣ ವೇಷ, ಕಲಶ ಹಿಡಿದ ಮಹಿಳೆಯರು ಹಾಗೂ ಸಮಾಜ ಬಾಂಧವರ ಮೆರವಣಿಗೆಯಲ್ಲಿ ಅತಿಥಿಗಳನ್ನು ಸ್ವಾಗತಿಸಲಾಯಿತು. ಯುವ ವೇದಿಕೆಯ ಸದಸ್ಯರ ಸ್ವಾಗತ ಗೀತೆ ಹಾಗೂ ಮಹಿಳಾ ವೇದಿಕೆಯ ಸದಸ್ಯರಿಂದ ತಿರುವಾದಿರ …