ಬೇಕೂರಿನಲ್ಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ ಸೋರಿಕೆಗೆ ಕಾರಣವೆಂದು ದೂರು
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ವಿತರಣೆಗೊಳ್ಳುತ್ತಿರುವ ಪ್ರದಾನ ಪೈಪ್‌ನಿಂದ ದಿನನಿತ್ಯ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿದ್ದು, ದುರಸ್ತಿಗೊಳಿಸದಿ ರುವುದು ಸಾರ್ವಜನಿಕರನ್ನು ಆಕ್ರೋಶಕ್ಕೀಡುಮಾಡಿದೆ. ಕೈಕಂಬ-ಬಾಯಾರು ರಸ್ತೆಯ ಬೇಕೂರು ಹಳೇ ಅಂಚೆ ಕಚೇರಿ ಸಮೀಪದಲ್ಲಿ ಪೈಪ್ ಬಿರುಕು ಬಿಟ್ಟು ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಕೊಡಂಗೆ ಹೊಳೆಯಲ್ಲಿರುವ ಬಾವಿಯಿಂದ ಬೇಕೂರು ಹಿರಣ್ಯಪದವಿನ ಟ್ಯಾಂಕ್‌ಗೆ ಸರಬರಾಜುಗೊಳ್ಳುತ್ತಿರುವ ಪ್ರಧಾನ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿದೆ. ಇಲ್ಲಿ ವಾಲ್‌ಗೇಟ್‌ನ್ನು ನಿರ್ಮಿಸಲಾಗಿದೆ. ಇದರಲ್ಲಿ ಸೋರಿಕೆಯಾದ ನೀರು ಪರಿಸರದ ಚರಂಡಿ ಸೇರುತ್ತಿದೆ. ಹಲವು ವರ್ಷಗಳಿಂದ …