ಕೂಲಿ ಕಾರ್ಮಿಕ ಕುಸಿದು ಬಿದ್ದು ನಿಧನ
ಬದಿಯಡ್ಕ: ಕನ್ಯಪ್ಪಾಡಿ ಹರಿಕೃಪ ನಿವಾಸಿ ಐತ್ತಪ್ಪ (54) ಕುಸಿದು ಬಿದ್ದು ನಿಧನ ಹೊಂದಿದರು. ಕೂಲಿ ಕಾರ್ಮಿಕನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಂಗಳದ ತುಳಸಿಗಿಡ ಬಳಿ ಪ್ರಾರ್ಥಿಸಿ ಹಿಂತಿರುಗುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾ ದರೂ ನಿಧನ ಹೊಂದಿದರು. ದಿ| ಕೊಗ್ಗು- ದಿ| ಅಂಗಾರೆ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ವಸಂತಿ, ಮಕ್ಕಳಾದ ಜಯಲಕ್ಷ್ಮಿ, ರಮ್ಯ, ಶ್ರೀಹರಿ, ಅನುಶ್ರೀ, ದೀಪಶ್ರೀ, ಅಳಿಯ ವಸಂತ, ಸಹೋದರರಾದ ಬಾಲಕೃಷ್ಣ, ಉದಯ, ಮಹಾಲಿಂಗೇಶ್ವರ, ಸಹೋದರಿ ವಸಂತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ …