ಓಣಂ ಲಾಟರಿ: ದ್ವಿತೀಯ ಬಹುಮಾನ ಬಂಟ್ವಾಳ ನಿವಾಸಿಗೆ

ಕಾಸರಗೋಡು: ಓಣಂ ಹಬ್ಬದಂಗವಾಗಿ ನಡೆಸಿದ ಕೇರಳ ರಾಜ್ಯ ಲಾಟರಿಯ ದ್ವಿತೀಯ ಬಹುಮಾನ ೧ ಕೋಟಿ ರೂ. ಕರ್ನಾಟಕ ನಿವಾಸಿಗೆ ಲಭಿಸಿದೆ. ಬಂಟ್ವಾಳ ನಿವಾಸಿ ರೋಹಿತ್‌ಗೆ ಈ ಬಹುಮಾನ ಲಭಿಸಿದ್ದು, ಇವರು ಟಿಕೆಟ್ ಸಹಿತ ತಲುಪಿ ಸಬ್ ಏಜೆಂಟ್ ಮಂಜುನಾಥನ ಜೊತೆ ಕಾಸರಗೋಡು ನ್ಯೂ ಲಕ್ಕಿ ಸೆಂಟರ್‌ಗೆ ತಲುಪಿ ಕೃತಜ್ಞತೆ ಸಲ್ಲಿಸಿದರು. ನ್ಯೂ ಲಕ್ಕಿ ಸೆಂಟರ್ ಏಜೆನ್ಸಿ ಮೂಲಕ ೨೫ ಲಕ್ಷ ರೂ.ನಂತೆ ಇತರ ಮೂರು ಮಂದಿಗೂ ಬಹುಮಾನ ಲಭಿಸಿದೆ.

ನಯಾಬಜಾರ್ ಕಾಲುದಾರಿಯಲ್ಲಿ ತೂತು : ಕಾಲ್ನಡೆ ಪ್ರಯಾಣಿಕರಿಗೆ ಅಪಾಯ ಸಾಧ್ಯತೆ

ಉಪ್ಪಳ: ಕಾಲುದಾರಿಯಲ್ಲಿನ ಕಬ್ಬಿಣದ ಮುಚ್ಚಳದ ತೂತು ಪಾದಚಾರಿಗಳಲ್ಲಿ ಆತಂಕ ಉಂಟುಮಾಡುತ್ತಿದೆ. ತಲಪಾಡಿ ಕಾಸರಗೋಡು ಸರ್ವೀಸ್ ರಸ್ತೆಯ ನಯಾಬಜಾರ್-ಕೈಕಂಬ ಮಧ್ಯೆ ಕಾಲುದಾರಿಯಲ್ಲಿ ಹೊಂಡಕ್ಕೆ ಮುಚ್ಚಲಾದ ಕಬ್ಬಿಣದ ಮುಚ್ಚಳದಲ್ಲಿ ತೂತು ಕಂಡುಬಂದಿದ್ದು, ಈ ದಾರಿಯಾಗಿ ಸಂಚರಿಸುವ ಪಾದಚಾರಿಗಳಾದ ಮಕ್ಕಳಿಗೆ ಅಪಾಯ ಕಾದಿದೆ. ಮಕ್ಕಳು ನಡೆದಾಡುವ ವೇಳೆ ಕಾಲು ಅದರೊಳಗೆ ಸಿಲುಕುವ ಸಾಧ್ಯತೆಯಿದ್ದು, ಅಲ್ಲದೆ ಯಾವುದಾರೂ ವಸ್ತುಗಳು ಹೊಂಡದೊಳಗೆ ಬೀಳಬಹು ದಾಗಿದೆ. ಈ ಮುಚ್ಚಳದಲ್ಲಿರುವ ಅಪಾ ಯದ ತೂತನ್ನು ದುರಸ್ತಿ ಗೊಳಿಸದಿದ್ದರೆ ಅಥವಾ ಬದಲಾಯಿಸದಿದ್ದಲ್ಲಿ ಅಪಾಯಕ್ಕೆ ಸಾಧ್ಯತೆಯಿರುವುದಾಗಿ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದುರಂತ …

ತೀವ್ರ ಬಡತನಮುಕ್ತ ರಾಜ್ಯ ಎಂಬ ಘೋಷಣೆಯನ್ನು ಸರಕಾರ ಹಿಂತೆಗೆಯಬೇಕು-ಎಂ.ಎಲ್. ಅಶ್ವಿನಿ

ಕಾಸರಗೋಡು: 2025 ನವೆಂಬರ್ 1 ರಂದು ಕೇರಳವನ್ನು ತೀವ್ರ ಬಡತನ ಮುಕ್ತ ರಾಜ್ಯವೆಂದು ಘೋಷಿಸಿದ ಪಿಣರಾಯಿ ವಿಜಯನ್ ಸರಕಾರದ ಕ್ರಮವನ್ನು ಹಿಂಪಡೆಯಲು ವಿ.ಡಿ. ಸತೀಶನ್ ಸಿದ್ಧರಾಗಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯಿತಿಯ 7ನೇ ವಾಡïðನಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿರುವ ಬಡ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು. ಸುಭದ್ರವಾದ ಸೂರು ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲದ ಅದೆಷ್ಟೋ ಕುಟುಂಬಗಳು ಕೇರಳದಲ್ಲಿ ಇಂದಿಗೂ ಇವೆ. ಪ್ರಧಾನಮಂತ್ರಿ ಆವಾಸ್ ಯೋ …

ರಾಮ್‌ದಾಸ್ ನಿಧನ

ಮಾನ್ಯ: ಮಾನ್ಯ ನಿವಾಸಿಯೂ ಕರ್ನಾಟಕ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿಯಾದ ರಾಮ್‌ದಾಸ್ (8೦) ನಿಧನಹೊಂದಿದರು. ಮೃತರು ಪತ್ನಿ ಲಕ್ಷ್ಮಿ, ಪುತ್ರಿ ದಿವ್ಯಮಣಿ, ಅಳಿಯ ಸಂತೋಷ್ (ನಾಪೊಕ್ಲು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಎಂ.ಆರ್. ತಿಮ್ಮಯ್ಯ ಈ ಹಿಂದೆ ನಿಧನರಾಗಿದ್ದಾರೆ.