ಹಳದಿ ಕಾಮಾಲೆ :ಬೀಡಿ ಕಾರ್ಮಿಕೆ ನಿಧನ
ಬಾಯಾರು: ಕನಿಯಾಲ ಚಿಮಿಣಿತ್ತಡ್ಕ ನಿವಾಸಿ, ಕೂಲಿ ಕಾರ್ಮಿಕ ಲೋಕೇಶ್ ಎಂಬವರ ಪತ್ನಿ ಮಮತಾ (37) ಹಳದಿ ಕಾಮಲೆ ತಗಲಿ ನಿಧನ ಹೊಂದಿದ್ದಾರೆ. ಕಳೆದ 15 ದಿನಗಳ ಹಿಂದೆ ಅಸೌಖ್ಯ ಉಂಟಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಹಳದಿ ಕಾಮಲೆ ತಗಲಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತಲಶ್ಯೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಪೆರ್ಮುದೆ ಬಳಿಯ ಮುನ್ನೂರು ಸುಂದರ- ಲಲಿತಾ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಭುವಿಕ್ಷ, ತನಿಷ್ಕಾ, …