ಹೋರಾಟ ಸಮಿತಿಗೆ ಎಸ್‌ಡಿಟಿಯು ಸೇರ್ಪಡೆಗೆ ವಿರೋಧ: ಆಟೋ ಟ್ಯಾಕ್ಸಿ ದರ ಏರಿಕೆ ಆಗ್ರಹಿಸಿ ನ.12ರಂದು ಬಿಎಂಎಸ್‌ನಿಂದ ಏಕಾಂಗಿ ಮುಷ್ಕರ
ಕಾಸರಗೋಡು: ಆಟೋ-ಟ್ಯಾಕ್ಸಿ ದರ ಏರಿಕೆ ಆಗ್ರಹಿಸಿ ನವಂಬರ್ 12ರಂದು ವಿವಿಧ ಕಾರ್ಮಿಕ ಸಂಘಟನೆಗಳನ್ನೊಳ ಗೊಂಡ ಸಂಯುಕ್ತ ಹೋರಾಟ ಸಮಿತಿ ನಡೆಸಲು ನಿರ್ಧರಿಸಿರುವ ಒಂದು ದಿನದ ಸೂಚನಾ ಮುಷ್ಕರಕ್ಕೆ ಸಿಐಟಿಯು ಏಕಪಕ್ಷೀಯವಾಗಿ ಎಸ್‌ಡಿಪಿಐಯ ಕಾರ್ಮಿಕ ಸಂಘಟನೆಯಾದ ಎಸ್‌ಡಿಟಿಯು ಅನ್ನು ಹೋರಾಟ ಸಮಿತಿಯ ಸಭೆಗೆ ಆಹ್ವಾನಿಸಿರುವುದನ್ನು ಪ್ರತಿಭಟಿಸಿ ಹೋರಾಟ ಸಮಿತಿಯಿಂದ ಹೊರಬರಲು ಬಿಎಂಎಸ್ ನಿರ್ಧರಿಸಿದೆ. ಸೂಚನಾ ಮುಷ್ಕರದ ಅಂಗವಾಗಿ ನ. ೩ರಂದು ತಿರುವನಂತಪುರದಲ್ಲಿ ಹೋರಾಟ ಘೋಷಣಾ ಸಮಾವೇಶ ಹಾಗೂ ಅನಂತರ ಎಲ್ಲಾ ಜಿಲ್ಲೆಗಳಲ್ಲೂ ಸಮನ್ವಯ ಸಭಗಳು ನಡದಿತ್ತು. ಕೆಲವು ಜಿಲ್ಲೆಗಳಲ್ಲಿ …