ಲಕ್ಷ್ಮಣ ಆಳ್ವ ನಿಧನ

ಮುಳ್ಳೇರಿಯ: ಆದೂರು ಪುಂಡಲ ನಿವಾಸಿ ಲಕ್ಷ್ಮಣ ಆಳ್ವ (76) ನಿಧನ ಹೊಂದಿದರು. ಬಂಟರ ಸಂಘದ ಆದೂರು ಘಟಕ ಸದಸ್ಯರಾಗಿದ್ದರು. ಮೃತರು ಪತ್ನಿ ಪದ್ಮಾವತಿ ಆಳ್ವ, ಮಕ್ಕಳಾದ ಸತೀಶ್ ಆಳ್ವ, ರಾಜೇಶ್ ಆಳ್ವ (ಕಾರಡ್ಕ ಪಂಚಾಯತ್ ಯುವಮೋರ್ಚಾ ಅಧ್ಯಕ್ಷ), ಸೊಸೆಯಂದಿರಾದ ವಾಣಿ ಎಸ್. ಆಳ್ವ, ನಿವೇದಿತ ಆರ್. ಆಳ್ವ, ಸಹೋದರರಾದ ಬಾಬು ಆಳ್ವ, ರಾಮ ಆಳ್ವ

ಕಾರ್ಮಿನ್ ಕ್ರಾಸ್ತಾ ನಿಧನ

ಮಾರ್ಪನಡ್ಕ: ಕುಂಬ್ಡಾಜೆ ಬಳ್ಳಪದವು ನಿವಾಸಿ  ಮಾರ್ಸಲ್ ರೋಡ್ರಿಗಸ್‌ರವರ ಪತ್ನಿ ಕಾರ್ಮಿನ್ ಕ್ರಾಸ್ತಾ (65) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಪ್ರವೀಣ್ ರೋಡ್ರಿಗಸ್, ಸ್ಟ್ಯಾನಿ ರೋಡ್ರಿಗಸ್, ಪ್ರಶಾಂತ್ ರೋಡ್ರಿಗಸ್, ವೆರೊನಿಕ, ಕ್ಲಾವಿಯಾ, ಸ್ಲಿವಿಯಾ, ಐರಿನ್, ಅಳಿಯಂದಿರಾದ ದಿನೇಶ್, ರಾಜೇಶ್, ಪೌಲ್ ಡಿ’ಸೋಜ, ಸೊಸೆಯಂದಿರಾದ ಪುಸಿಲ್ಲ, ಐರಲ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಾರಂಪಾಡಿ ಇಗರ್ಜಿಯಲ್ಲಿ ನಾಳೆ ಅಂತ್ಯ ಸಂಸ್ಕಾರ ನಡೆಯಲಿದೆ.

ಚಂದ್ರಶೇಖರ ಮುಖಾರಿ ನಿಧನ

ನೀರ್ಚಾಲು: ರತ್ನಗಿರಿ ನಿವಾಸಿ ಚಂದ್ರಶೇಖರ ಮುಖಾರಿ (47) ನಿಧನ ಹೊಂದಿದರು. ಇವರು ಕೂಲಿ ಕಾರ್ಮಿಕನಾಗಿದ್ದರು. ಈ ಹಿಂದೆ ಮಜೀರ್‌ಪಳ್ಳದಲ್ಲಿದ್ದ ಕಂಡಕ್ಟರ್ ನಾರಾಯಣ ಮುಖಾರಿ- ದಿ| ಜಯಂತಿ ದಂಪತಿಯ ಪುತ್ರನಾದ ಮೃತರು ಪತ್ನಿ ಜಲಜಾ, ಸಹೋದರ ಕೃಷ್ಣ ಸಹೋದರಿ ರತ್ನಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಿರಿಯ ಬಡಗಿ ನಿಧನ

ಪೈವಳಿಕೆ: ಚಿಪ್ಪಾರು ನಿವಾಸಿ, ಹಿರಿಯ ಬಡಗಿ ತಿಮ್ಮಯ್ಯ ಆಚಾರ್ಯ (72) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಾಲ್ಯದಿಂದಲೇ ಮರದ ಕೆಲಸವನ್ನು ನಿರ್ವಹಿಸುತ್ತಿದ್ದ ಇವರು ಚಿರಪರಿಚಿತರಾಗಿದ್ದರು. ಹವ್ಯಾಸಿ ಮದ್ದಳೆ ವಾದಕರೂ ಆಗಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಪ್ರಕಾಶ್, ಕಿಶೋರ್, ಲೊಕೇಶ್, ಹರಿಪ್ರಸಾದ್, ಮಮತ, ಸಮಿತಾ, ಶ್ವೇತಾ, ಅಳಿಯಂದಿರಾದ ನವೀನ, ದಿನೇಶ, ಸೊಸೆಯಂದಿರಾದ ವಿದ್ಯಾ, ದೀಪಿಕಾ, ಸಹೋದರ ದೇವಪ್ಪ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಸೇಸಪ್ಪ ಆಚಾರ್ಯ, ಸಹೋದರಿಯರಾದ ತುಂಗಾ, ಸಾವಿತ್ರಿ, ಚಂದ್ರಾವತಿ, ರಾಧ, …