445 ಕೇಂದ್ರಗಳಲ್ಲಿ ಆಪರೇಷನ್ ಪಿ. ಹಂಟ್ ಕಾರ್ಯಾಚರಣೆ: 6 ಮಂದಿ ಸೆರೆ; 173 ಉಪಕರಣಗಳು ವಶ
ಕಾಸರಗೋಡು: ಇಂಟರ್ ನೆಟ್‌ನಿಂದ ಮಕ್ಕಳ ನಗ್ನ ಚಿತ್ರಗಳನ್ನು ಡೌನ್‌ಲೋಡ್ ಮಾಡಿ ಸಂಗ್ರಹಿ ಸುವವರ ಪತ್ತೆಗಾಗಿ ಆಪರೇಷನ್ ಪಿ. ಹಂಟ್‌ನಂತೆ ಪೊಲೀಸರು ಆರಂಭಿ ಸಿರುವ ಕಾರ್ಯಾ ಚರಣೆಯಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಕಾಸರಗೋಡು ಸೇರಿದಂತೆ ರಾಜ್ಯ ದಾದ್ಯಂತವಾಗಿ ೪೫೫ ಕೇಂದ್ರಗ ಲ್ಲಾಗಿ ಈ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ಒಟ್ಟು 37 ಪ್ರಕರಣ ಗಳನ್ನು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ದಾಖಲಿಸಲಾಗಿದೆ.
ಇದರಂತೆ ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಆಲಪ್ಪುಳ ಜಿಲ್ಲೆಯಲ್ಲಿ ಎಂಟು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಆರು ಪ್ರಕರಣಗಳು ದಾಖಲುಗೊಂಡಿವೆ. ರಾಜ್ಯದ 20 ಪೊಲೀಸ್ ಜಿಲ್ಲೆಗಳಿಗೊಳಪಟ್ಟ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿ ಗೊಳ ಲ್ಲೂ ಈ ಕಾರ್ಯಾಚರಣೆ ನಡೆಸ ಲಾಗಿದೆ. ಬಂಧಿತರಲ್ಲಿ ಕಾಸರ ಗೋಡು ಜಿಲ್ಲೆಯವರೂ ಒಳಗೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಸೇರಿದಂತೆ 173 ಇಲೆಕ್ಟ್ರೋನಿಕ್ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 106 ಸೆಕ್ಷನ್ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ 107 ವರದಿಗಳನ್ನು ತಯಾರಿಸಲಾಗಿದೆ.