500 ರೂ.ಗಳ ನಕಲಿ ನೋಟುಗಳು ವ್ಯಾಪಕ: ಜಾಗ್ರತೆ ಪಾಲಿಸಲು ಕರೆ

ಹೊಸದಿಲ್ಲಿ: ಅಸಲಿ ನೋಟನ್ನೇ ಹೋಲುವ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ವ್ಯಾಪಕವಾಗಿ ಚಲಾವಣೆಯಲ್ಲಿದ್ದು, ಅದರಿಂದ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಎಂದು ನಮೂದಿಸಿರುವಲ್ಲಿ ರಿಸರ್ವ್ ಎಂಬ ಶಬ್ದದಲ್ಲಿ ಇ ಎಂಬ ಅಕ್ಷರದ ಬದಲು ಎ ಎಂದು ದಾಖಲಾಗಿರುವ ನೋಟುಗಳು ಇದಾಗಿವೆ.

ಬೇರೆ ಯಾವುದೇ ತಪ್ಪುಗಳು ನಕಲಿ ನೋಟಿನಲ್ಲಿ ಕಾಣಿಸುತ್ತಿಲ್ಲ. ಆದ್ದರಿಂದ ಲಭಿಸುವ 500 ರೂಪಾಯಿ ನೋಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದು ಗೃಹ ಸಚಿವಾಲಯ ತಿಳಿಸಿದೆ. ನಕಲಿ ನೋಟುಗಳು ಲಭಿಸಿದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದೂ ನಿರ್ದೇಶಿಸಲಾಗಿದೆ. ಎಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂದು ಪತ್ತೆಹಚ್ಚಲಾಗಿಲ್ಲ. ಈ ಕುರಿತಾಗಿ ಸಿಬಿಐ ಹಾಗೂ ಎನ್‌ಐಎ ಸಹಿತ ವಿವಿಧ ತನಿಖಾ ಏಜೆನ್ಸಿಗಳಿಗೆ ಸಚಿವಾಲಯ ಜಾಗ್ರತಾ ನಿರ್ದೇಶ ನೀಡಿದೆ. ಅದೇ ರೀತಿ ಬ್ಯಾಂಕ್ ಸಹಿತ ಹಣಕಾಸು ಸಂಸ್ಥೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

You cannot copy contents of this page