ಜಿಲ್ಲೆಯಲ್ಲಿ ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ 76  ಶಾಲೆಗಳು ಕಾರ್ಯಾಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 76 ಶಾಲೆಗಳು ಸುರಕ್ಷಾ ಪ್ರಮಾಣಪತ್ರಗಳಿಲ್ಲದೆ ಕಾರ್ಯಾಚರಿಸುತ್ತಿದೆಯೆಂದು ತಿಳಿದುಬಂದಿದೆ. ಇದರಲ್ಲಿ 69 ಸರಕಾರಿ ಶಾಲೆಗಳಾಗಿವೆ. 4 ಐಡೆಡ್, 3 ಅನ್‌ಐಡೆಡ್ ಶಾಲೆಗಳಾಗಿವೆ.

ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಲಾಗುತ್ತಿದೆಯೆಂದು ಅಧಿಕಾರಿಗಳು ತಿಳಿಸುತ್ತಿರುವಾಗಲೇ ಇಷ್ಟೊಂದು ಸಂಖ್ಯೆಯಲ್ಲಿ ಶಾಲೆಗಳು ಜಿಲ್ಲೆಯಲ್ಲಿ ಸುರಕ್ಷತೆಯಿಲ್ಲದೆ ಕಾರ್ಯಾಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇದರಿಂದ ಈ ಶಾಲೆಗಳನ್ನು ತೆರವುಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಕೆಲವೆಡೆ ಜೀರ್ಣಿಸಿದ ಕಟ್ಟಡಗಳ ಸಮೀಪ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಹೊಸ ಕಟ್ಟಡಗಳಿಗೂ ಸುರಕ್ಷಾ ಪ್ರಮಾಣಪತ್ರ ಲಭಿಸಿಲ್ಲವೆಂದು ತಿಳಿದುಬಂದಿದೆ. ಶಾಲೆಗಳು ಜೂನ್‌ನಲ್ಲಿ ತೆರೆಯುವ ಮುಂಚಿತವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಂದ ಕಟ್ಟಡ ಸುರಕ್ಷಾ ಪ್ರಮಾಣಪತ್ರ ಸಲ್ಲಿಸಬೇಕೆಂಬ ನಿಬಂಧನೆಯಿದೆ. ಅಲ್ಲದೆ ಅನುಮತಿ ಕೈವಶವಿಲ್ಲದ ಶಾಲೆಗಳಿಗೆ ಕಾರ್ಯಾಚರಿಸಲು ಸಾಧ್ಯವಿಲ್ಲವೆಂಬ ನಿರ್ದೇಶವೂ ಜ್ಯಾರಿಯಲ್ಲಿದೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಈ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮುಂಚೆ ಹೊರಡಿಸಿದ ಸುತ್ತೋಲೆಯಲ್ಲಿ ಈ ಬಗ್ಗೆ ಕಠಿಣ ನಿರ್ದೇಶವಿದ್ದರೂ ಅದನ್ನು ಪಾಲಿಸಲು ಶಾಲೆಗಳ ಅಧಿಕಾರಿಗಳು  ಮುಂದಾಗಿಲ್ಲವೆಂದೂ ಹೇಳಲಾಗುತ್ತಿದೆ.

RELATED NEWS

You cannot copy contents of this page