960 ಗ್ರಾಂ ಚಿನ್ನ ಸಾಗಿಸಿದ ಏರ್ ಹೋಸ್ಟರ್ಸ್ ಸೆರೆ
ಕಣ್ಣೂರು: ಮಸ್ಕತ್‌ನಿಂದ ಕಣ್ಣೂರಿಗೆ ತಲುಪಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್‌ಕ್ರೂ ಸೆರೆಯಾಗಿದ್ದಾಳೆ. ಸುರಭಿ ಕಾಟೂನ್ ಎಂಬಾಕೆ 960 ಗ್ರಾಂ ಚಿನ್ನ ಸಾಗಿಸಲು ಯತ್ನಿಸಿರುವುದು ಕಂದಾಯ ಇಂಟಲಿಜೆನ್ಸ್ ವಿಭಾಗ ಯುವತಿಯನ್ನು ಸೆರೆಹಿಡಿದಿದೆ. ದ್ರವರೂಪದಲ್ಲಿರುವ ಚಿನ್ನವನ್ನು ಸಾಗಿಸಲು ಈಕೆ ಯತ್ನಿಸಿದ್ದಳು. ಈ ಮೊದಲು ಕೂಡಾ ಈಕೆ ಚಿನ್ನ ಸಾಗಿಸಿರು ವುದಾಗಿ ಕಸ್ಟಮ್ಸ್‌ಗೆ ಸೂಚನೆ ಲಭಿಸಿತ್ತು. ಅದರ ಆಧಾರದಲ್ಲಿ ತನಿಖೆ ನಡೆಯುತ್ತಿದೆ.