ಬದಿಯಡ್ಕ: ಎಕ್ಸೈಸ್ ಗುಪ್ತಚರ ವಿಭಾಗ ಮತ್ತು ಬದಿಯಡ್ಕ ಎಕ್ಸೈಸ್ ರೇಂಜ್‌ನ ಕಾಟುಕುಕ್ಕೆ ಬಜಕುರೆ ಯಲ್ಲಿ ಅಧಿಕಾರಿಗಳು ನಡೆಸಿದ ಸಂಯುಕ್ತ ಕಾರ್ಯಾಚರಣೆಯಲ್ಲಿ ೩.೫೮ ಗ್ರಾಂ ಗಾಂಜಾ ಮತ್ತು ೯೦ ಮಿಲ್ಲಿ ಗ್ರಾಂ ಮಾದಕ ದ್ರವ್ಯವಾದ ಮೆತಾಫಿಟ್‌ಫಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಾಣಾಜೆ ಆರ್ಲಪದವಿನ ಪ್ರಮೋದ್ ಕುಟ್ಟಿ ನ (28), ಎಣ್ಮಕಜೆ ಇಡಿಯಡ್ಕದ ಮುಹಮ್ಮದ್ ಹರ್ಷಾದ್ (30) ಎಂಬವರನ್ನು ಬಂಧಿಸಿ ಅವರ ವಿರುದ್ಧ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಗಳಿಬ್ಬರು ಸಂಚರಿಸುತ್ತಿದ್ದ ಕಾರನ್ನು ಅಬಕಾರಿ ತಂಡದವರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಇಲಾಖೆಯ ಇ.ಐ. ಆಂಡ್ ಐಬಿ ಇನ್ಸ್‌ಪೆಕ್ಟರ್ ಪ್ರಮೋದ್, ಬದಿಯಡ್ಕ ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ ಸುಬಿನ್ ರಾಜ್, ಇ.ಐ. ಆಂಡ್ ಐ.ಬಿಯ ಬಿಜೋಯ್, ಶ್ರೀನಿವಾಸನ್ ಪತ್ತಿಲ್, ಸುರೇಶನ್, ಬದಿಯಡ್ಕ ಅಬಕಾರಿ ರೇಂಜ್‌ನ ಸಿಬ್ಬಂದಿ ಗಳಾದ ಮನೋಜ್, ಶಾಲಿನಿ, ಜನಾರ್ದನ ಎಂಬವರು ಒಳ ಗೊಂಡಿದ್ದಾರೆ.







