ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣ: ಆರೋಪಿ ಯುವತಿಗೆ ಸಜೆ, ಜುಲ್ಮಾನೆ
ಕಾಸರಗೋಡು: ಜ್ವರ ತಗಲಿ ಆಸ್ಪತ್ರೆಗೆ ಬಂದು ಸರದಿ ಸಾಲಿನಲ್ಲಿ ತಂದೆ ಜತೆ ನಿಂತಿದ್ದ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಪ್ರಕರಣದ ಆರೋಪಿಯಾಗಿರುವ ಇಬ್ಬರ ಪೈಕಿ ತಮಿಳುನಾಡು ನಿವಾಸಿಯಾಗಿರುವ ಯುವತಿಗೆ ಕಾಸರಗೋಡು ಚೀಫ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ಆರು ತಿಂಗಳ ಸಜೆ ಹಾಗೂ 10,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ತಮಿಳುನಾಡು ಕೃಷ್ಣಗಿರಿ ಹೊಸೂರು ಅಮ್ಮಾಳ್ ಕೋವಿಲ್‌ನ ತೆರು ನಿವಾಸಿ ದಿವ್ಯ (44) ಎಂಬಾಕೆಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
2017 ಜುಲೈ 5ರಂದು ಮಧ್ಯಾಹ್ನ ಚೆರ್ಕಳ ಐದನೇ ಮೈಲಿನಲ್ಲಿರುವ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಕಳವು ನಡೆದಿದೆ. ಚೆರ್ಕಳ ಬಂಬ್ರಾಣಿ ನಗರದ ಅಬ್ದುಲ್ ರಹಿಮಾನ್ ಎಂಬವರು ತಮ್ಮ ಒಂದು ವರ್ಷದ ಗಂಡು ಮಗುವನ್ನು ಪ್ರಸ್ತುತ ಆಸ್ಪತ್ರೆಗೆ ವೈದ್ಯರನ್ನು ಕಾಣಿಸಲೆಂದು ಬಂದು ಸರದಿ ಸಾಲಿನಲ್ಲಿ ನಿಂತಿದ್ದಾಗ ಆರೋಪಿಗಳು ಸದ್ದಿಲ್ಲದೆ ಆ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ್ದರು. ಆ ಬಗ್ಗೆ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ನಡೆಸಿ ಶೋಧ ಕಾರ್ಯಾಚರಣೆಯಲ್ಲಿ ಒಂದನೇ ಆರೋಪಿ ದಿವ್ಯಾ ಮತ್ತು ಎರಡನೇ ಆರೋಪಿ ಇನ್ನೋರ್ವೆ ಮಹಿಳೆ ಅಮ್ಮಾಶಾ ಕೋವಿಲ್‌ತೆರು ನಿವಾಸಿ ಯಾದ ಜನ್‌ಜನಯ್ ಎಂಬಿಬ್ಬರನ್ನು ಅಂದೇ ಬಂಧಿಸಿದ್ದರು. ಆ ಬಳಿಕ ಅವರಿ ಬ್ಬರು ಜಾಮೀನಿನಲ್ಲಿ ಬಿಡುಗಡೆಗೊಂ ಡಿದ್ದರು. ಆ ಬಳಿಕ ಎರಡನೇ ಆರೋಪಿ ಜನಜನ್‌ಯು ತಲೆಮರೆಸಿಕೊಂಡಿದ್ದು, ಅದರಿಂದ ಆಕೆಯ ಮೇಲಿನ ಕೇಸನ್ನು ನ್ಯಾಯಾಲಯ ಪ್ರತ್ಯೇಕಗೊಳಿಸಿ ವಿಚಾರಣೆಗಾಗಿ ಮುಂದೂಡಿದೆ.