ಜೂನ್ ಮೊದಲ ದಿನವೇ ಶುಭಸುದ್ದಿ: ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ
ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಸುತ್ತಿನ ಮತದಾನ ಇಂದು ಬೆಳಿಗ್ಗೆ ಆರಂಭಗೊAಡಿರುವAತೆಯೇ ಅದರ ಜತೆಗೆ ಅಡುಗೆ ಅನಿಲ ದರ ಇಳಿಕೆಯಾಗಿದೆ. ಆ ಮೂಲಕ ಈ ತಿಂಗಳ ಮೊದಲ ದಿನದಲ್ಲೇ ಗ್ರಾಹಕ ರಿಗೆ ಶುಭ ಸುದ್ದಿ ಸಿಕ್ಕಿದಂತಾಗಿದೆ.
ಇAದಿನಿAದ ಜ್ಯಾರಿಗೆ ಬರುವಂತೆ ತೈಲ ಮಾರಾಟ ಸಂಸ್ಥೆಗಳ 19 ಕೆ.ಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 72 ರೂ. ಕಡಿಮೆ ಮಾಡಿವ. ಆದರೆ ಗೃಹಬಳಕೆಗೆ ಹೆಚ್ಚಾಗಿ ಬಳಸಲಾಗುತ್ತಿರುವ 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಪ್ರತೀ ತಿಂಗಳ ಆರಂಭದಲ್ಲಿ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆಯನ್ನು ತೈಲ ಮಾರು ಕಟ್ಟೆ ಏಜೆನ್ಸಿಗಳು ಪರಿಶೀಲಿಸುತ್ತಿವೆ ಮತ್ತು ಅದಕ್ಕೆ ಹೊಂದಿಕೊAಡು ದೇಶೀಯ ಮಾರುಕಟ್ಟೆಗಳಲ್ಲಿ ಎಲ್ಪಿಜಿ ಬೆಲೆಯನ್ನು ಕಡಿಮೆ ಅಥವಾ ಹೆಚ್ಚಿಸಲಾಗುತ್ತಿದೆ. ಆದರೆ ಗ್ಯಾಸ್ ಬೆಲೆ ಇಳಿಕೆಗೂ ಚುನಾವಣೆಗೂ ಯಾವುದೇ ರೀತಿಯ ಸಂಬAಧವಿಲ್ಲವೆAದು ತೈಲ ಸಂಸ್ಥೆಗಳು ಸ್ಪಷ್ಟಪಡಿಸಿವೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡ್ಗಳನ್ನು ಸಾಮಾನ್ಯವಾಗಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸಲಾಗುತ್ತಿದೆ. ಮನೆಗಳಲ್ಲಿ 14.2 ಕೆಜಿ ಎಲ್ಪಿಜಿ ಸಿಲೆಂಡರ್ಗಳನ್ನು ಬಳಸಲಾಗುತ್ತಿದೆ.