ಜನರಲ್ ಆಸ್ಪತ್ರೆ ಪರಿಸರದಲ್ಲಿ ಬೀದಿ ನಾಯಿಗಳು: ಆತಂಕ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆ ಪರಿಸರದಲ್ಲಿ ಬೀದಿನಾಯಿಗಳ ಉಪಟಳ ತೀವ್ರ ಗೊಂಡಿದೆ. ಗುಂಪಾಗಿ ತಲುಪುವ ಬೀದಿ ನಾಯಿಗಳು ರೋಗಿಗಳು ತಪಾಸಣೆಗಾಗಿ ಕಾದು ನಿಂತಿರುವ ಸ್ಥಳದಲ್ಲಿ ಭೀತಿ ಹುಟ್ಟಿಸುತ್ತಿವೆ. ನಾಯಿಗಳು ಕಚ್ಚಾಡುತ್ತಾ ರೋಗಿ ಗಳು ಕುಳಿತಿರುವಲ್ಲಿಗೆ ತಲುಪುತ್ತಿದ್ದು, ಇದರಿಂದ ಯಾವುದೇ ಕ್ಷಣದಲ್ಲಿ ಅವುಗಳು ದಾಳಿ ನಡೆಸಲು ಸಾಧ್ಯತೆ ಇದೆ ಎಂಬ ಭಯವುಂಟಾಗಿದೆ. ಆದ್ದ ರಿಂದ ಸಮಸ್ಯೆಗೆ ಪರಿಹಾರ ಕಂಡುಕೊ ಳ್ಳಬೇಕೆಂಬ ಬೇಡಿಕೆ ತೀವ್ರಗೊಂಡಿದೆ.

You cannot copy contents of this page