ವಿಶ್ವಹಿಂದೂ ಪರಿಷತ್ ಗ್ರಾಮಾಂತರ ಪ್ರಖಂಡ ಕಾರ್ಯಕರ್ತರ ಸಮಾವೇಶ

ಮುಳ್ಳೇರಿಯ: ವಿಶ್ವಹಿಂದೂ ಪರಿಷತ್ ಕಾಸರಗೋಡು ಗ್ರಾಮಾಂತರ ಪ್ರಖಂಡದ ಕಾರ್ಯಕರ್ತರ ಸಮಾವೇಶ ಮುಳ್ಳೇರಿಯ ಗಣೇಶ ಮಂದಿರದಲ್ಲಿ ಜರಗಿತು. ಅಖಿಲ ಭಾರತ ಸಹ ಕಾರ್ಯದರ್ಶಿ ಸ್ಥಾನುಮಲೆಯಾನ್‌ಜಿ ದೀಪ ಬೆಳಕಿಸಿ ಉದ್ಘಾಟಿಸಿದರು. 1964ರಲ್ಲಿ ಪ್ರಾರಂಭವಾದ ವಿಶ್ವಹಿಂದೂ ಪರಿಷತ್ ಈಗ ಷಷ್ಠಿಪೂರ್ತಿ ಆಚರಣೆಯಲ್ಲಿದ್ದು, ಎಲ್ಲಾ ಪ್ರಖಂಡಗಳಲ್ಲಿಯೂ ಸಂಘಟನೆಯನ್ನು ಬಲಪಡಿಸಬೇಕೆಂದು ಅವರು ಕರೆ ನೀಡಿದರು. ಗ್ರಾಮಾಂತರ ಪ್ರಖಂಡ ಅಧ್ಯಕ್ಷ ವಾಮನ ಆಚಾರ್ಯ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದರು. ಕಣ್ಣೂರು ವಿಭಾಗ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿಗಳಾದ ಸುರೇಶ್‌ಬಾಬು, ಗಣೇಶ ಮಾವಿನಕಟ್ಟೆ, ಮುಖಂಡರಾದ ಮೀರಾ ಆಳ್ವ, ಹರಿಣಿ ಜಿ.ಕೆ. ನಾಯ್ಕ್, ಜಯಾ ಶರ್ಮಿಳ, ಸೌಮ್ಯ ಪ್ರಕಾಶ್, ನಂದಿನಿ, ಮಾಧವನ್ ನಂಬೂದಿರಿ, ಪ್ರೀತಿ, ಕೃಷ್ಣನ್ ಅಮ್ಮಂಗೋಡು, ಶಿವರಾಮ ಬಳಕ್ಕ, ಮಾಧವ ಭಟ್ ಸಹಿತ ಹಲವರು ಉಪಸ್ಥಿತರಿದ್ದರು. ಸಂತೋಷ್ ಸ್ವಾಗತಿಸಿ, ಹರಿಪ್ರಸಾದ್ ಪುತ್ರಕಳ ವಂದಿಸಿದರು.

RELATED NEWS

You cannot copy contents of this page