ಮನೆಯೊಳಗೆ ವೃದ್ಧನ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮನೆಯೊಳಗೆ ವೃದ್ಧನ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಡಂಕುಳಿ ಪಾಯಂ ವೆಳ್ಳರಿಕ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಎಂ. ಚಂದ್ರನ್ ನಾಯರ್ (60) ಎಂಬವರು ಮೃತ ವ್ಯಕ್ತಿಯಾಗಿದ್ದಾರೆ. ಪತ್ನಿ ಇವರೊಂದಿಗೆ ಸಿಟ್ಟುಗೊಂಡು ತೆರಳಿದ್ದು ಇದರಿಂದ ಚಂದ್ರನ್ ನಾಯರ್ ಹಲವು ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದರು.
ನಿನ್ನೆ ಸಂಜೆ ಇವರ ಮನೆ ಸಮೀಪದಲಗಿ ನಡೆದು ಹೋಗುತ್ತಿದ್ದವರಿಗೆ ದುರ್ನಾತ ಅನುಭವಗೊಂಡಿದೆ. ಇದರಿಂದ ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಚಂದ್ರನ ನಾಯರ್‌ರ ಮೃತದೇಹ ಮಂಚದ ಮೇಲೆ ಜೀರ್ಣಿಸಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಬೇಡಗಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತ ಪಟ್ಟು ಹದಿನೆಂಟು ದಿನಗಳಾಗಿರ ಬಹುದೆಂದು ಅಂದಾಜಿಸಲಾಗಿದೆ. ಚಂದ್ರನ್ ನಾಯರ್‌ರ ಸಹೋದರನ ಪುತ್ರ ಕಿಶೋರ್ ನೀಡಿದ ದೂರಿನಂತೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.