ಬಿಜೆಪಿ ನೇತಾರ ಮನೋಜ್ ಕುಮಾರ್ ನಿಧನ

ಕಾಸರಗೋಡು: ಬಿಜೆಪಿ ನೇತಾರ ನೀಲೇಶ್ವರ ತಟ್ಟಾಚ್ಚೇರಿ ರಾಮರದ ನ್ಯಾಯವಾದಿ ಪಿ. ಮನೋಜ್ ಕುಮಾರ್ (60) ನಿಧನ ಹೊಂದಿ ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಪಕ್ಷದ ಲೀಗಲ್ ಸೆಲ್ ರಾಜ್ಯ ಕೋ-ಆರ್ಡಿನೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಸೌಖ್ಯ ಬಾಧಿಸಿದ ಇವರನ್ನು ಮಂಗಳೂರಿನ  ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿಧನ ಸಂಭವಿಸಿದೆ. ದಿವಂಗತರಾದ ಬಾಲಗೋಪಾಲನ್-ಪುದಿಯಪರಂ ಬಿಲ್ ಪದ್ಮಾವತಿ ದಂಪತಿಯ ಪುತ್ರನಾದ ಮೃತರು ಸಹೋದರ  ಪಿ. ಶಶಿಕುಮಾರ್, ಸಹೋದರಿಯರಾದ ಪಿ. ವಿನಯ ಕುಮಾರಿ, ಪಿ. ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page