ಟೆಂಪೋ-ಸ್ಕೂಟರ್ ಢಿಕ್ಕಿ ಹೊಡೆದು ಕಾಸರಗೋಡು ಅರಬಿಕ್ ಕಾಲೇಜಿನ ವಿದ್ಯಾರ್ಥಿ ಮೃತ್ಯು
ತಲಪ್ಪಾಡಿ: ಟೆಂಪೋ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಕಾಸರಗೋಡು ಅರಬಿಕ್ ಶರಿಯತ್ ಕಾಲೇಜು ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟರು. ನಡುಪದವು ನಿವಾಸಿ ಮೊದೀನ್ಕುಂಞ ಬಾವರ ಪುತ್ರ ಅಬೂಬಕ್ಕರ್ ಸಿದ್ದಿಕ್ ರಸ್ವಿ (22) ಮೃತಪಟ್ಟವರು.
ನಿನ್ನೆ ಮುಂಜಾನೆ ಉಳ್ಳಾಲ ಕಾಟುಕೋಡಿ ನಡುಪದವ್ ನಲ್ಲಿ ಅಪಘಾತ ಸಂಭವಿಸಿದೆ. ದೇರಳಕಟ್ಟೆ ಭಾಗದಿಂದ ಬರುತ್ತಿದ್ದ ಸ್ಕೂಟರ್ ಹಾಗೂ ಮುಡಿಪುನಿಂದ ತೊಕ್ಕೋಟು ಭಾಗಕ್ಕೆ ಸಂಚರಿಸುತ್ತಿದ್ದ ಟೆಂಪೋ ಮುಖಾ ಮುಖಿಯಾಗಿ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಯುವಕ ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೆಂಪೋ ಚಾಲಕನಿಗೂ ಗಾಯ ಉಂಟಾಗಿದ್ದು, ಮಂಗಳೂರು ದಕ್ಷಿಣ ಟ್ರಾಫಿಕ್ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.