ಪತ್ರ ಬರೆದಿಟ್ಟು ಪತಿ ಯುವತಿಯೊಂದಿಗೆ ಪರಾರಿ: ಪತ್ನಿ ದೂರು

ಕಾಸರಗೋಡು:  ಪತ್ನಿಗೆ ಪತ್ರ ಬರೆದಿಟ್ಟ ಬಳಿಕ ಪತಿ ಯುವತಿಯೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪದಲ್ಲಿ ವಾಸಿಸುವ ಇಡುಕ್ಕಿ ಕಟ್ಟಪ್ಪನ ಕೊಚ್ಚು ವೀಟಿಲ್ ಎಸ್. ಸರಸ್ವತಿ (32)ರ ದೂರಿನಂತೆ  ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.  ಈ ತಿಂಗಳ 3ರಂದು ಮುಂಜಾನೆ 2.30ರಿಂದ 5ರಂದು ಬೆಳಿಗ್ಗೆ 9.30ರ ಮಧ್ಯೆಗಿನ ಸಮಯದಲ್ಲಿ ಪತಿ ಕುಮಾರವೇಲ್ (38) ನಾಪತ್ತೆಯಾಗಿರುವುದಾಗಿ ಸರಸ್ವತಿ ದೂರಿದ್ದಾರೆ. ಕಟ್ಟಪ್ಪನದಲ್ಲಿರುವ ಮನೆ ಬಳಿಯಲ್ಲಿರುವ ಸ್ನೇಹ ಎಂಬ ಯುವತಿಯ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿಯೂ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

You cannot copy contents of this page