ವಿವಿಧೆಡೆ ವ್ಯಾಪಕಗೊಂಡ ಮಟ್ಕಾ ದಂಧೆ: ಅಂಗಡಿಪದವಿನಲ್ಲಿ 26,650 ರೂ. ಸಹಿತ ಓರ್ವ ಸೆರೆ
ಉಪ್ಪಳ: ಹೊಸಂಗಡಿ ಹಾಗೂ ಪರಿಸರ ಪ್ರದೇಶಗಳಲ್ಲಿ ವ್ಯಾಪಕ ಮಟ್ಕಾ ದಂಧೆ ನಡೆಯುತ್ತಿರುವುದಾಗಿ ತಿಳಿದು ಬಂದಿದೆ. ನಿನ್ನೆ ರಾತ್ರಿ ಮಂಜೇಶ್ವರ ಪೊಲೀಸರು ನಡೆಸಿದ ಕಾರ್ಯಾಚರಣೆ ಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಓರ್ವನನ್ನು ಬಂಧಿಸಲಾಗಿದೆ. ಹೊಸಂ ಗಡಿ ಮಿತ್ತಕನಿಲ ನಿವಾಸಿ ರವೀನ್ ಕುಮಾರ್ ಬಿ.ಎಂ. (43) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಕೈಯಿಂದ 26,650 ರೂ. ವಶಪಡಿಸಲಾಗಿದೆ.
ನಿನ್ನೆ ರಾತ್ರಿ 8.45ರ ವೇಳೆ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ಅಂಗಡಿಪದವು ಬಸ್ ನಿಲ್ದಾಣ ಬಳಿ ಗಸ್ತು ನಡೆಸುತ್ತಿದ್ದಾಗ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ತಿಳಿದು ಬಂದಿದೆ. ಕೂಡಲೇ ಅಲ್ಲಿಗೆ ದಾಳಿ ನಡೆಸಿ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ, ಹೊಸಂಗಡಿ, ಉಪ್ಪಳ ಸಹಿತ ನಾಡಿನ ವಿವಿಧ ಭಾಗಗಳಲ್ಲಿ ಮಟ್ಕಾ ದಂಧೆ ನಡೆಯುತ್ತಿದೆಯೆಂಬ ಆರೋಪ ಕೇಳಿ ಬರುತ್ತಿದೆ. ಆದರೆ ಅದರ ವಿರುದ್ಧ ಸಂಬಂಧಪಟ್ಟ ಅಧಿಕಾರಿ ಗಳಿಂದ ಸೂಕ್ತ ಕ್ರಮ ಉಂಟಾಗದಿ ರುವುದೇ ದಂಧೆ ವ್ಯಾಪಕಗೊಳ್ಳಲು ಕಾರಣವಾಗಿದೆಯೆಂದೂ ನಾಗರಿಕರು ತಿಳಿಸುತ್ತಿದ್ದಾರೆ.