ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಸಂಪೂರ್ಣ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಕಲಿಯಲು ಅವಕಾಶವಾಗಬೇಕು- ಶಾಸಕ ಎನ್.ಎ.

ಕಾಸರಗೋಡು: ಶಿಕ್ಷಣ ಹಕ್ಕು ಕಾನೂನು ಪ್ರಕಾರ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ರಾಜ್ಯದ ಎಲ್ಲಾ ವಿದ್ಯಾ ರ್ಥಿಗಳಿಗೆ ಅವರವರ ಪಂಚಾಯತ್ ನಲ್ಲೇ ಕಲಿಯಲು ಅವಕಾಶ ಉಂಟು ಮಾಡಬೇಕೆಂದೂ, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ಗಳಿಗೆ ಸಾಕಾಗುವಷ್ಟು ಹೆಚ್ಚುವರಿ ಬ್ಯಾಚ್‌ಗಳನ್ನು ಜಿಲ್ಲೆಯ ಎಲ್ಲಾ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಅಧ್ಯಾ ಪಕರನ್ನು, ಪ್ರಾಂಶುಪಾಲರನ್ನು ನೇಮP ಗೊಳಿಸಬೇಕೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಆಗ್ರಹಿಸಿದರು. ಕೆ.ಪಿ.ಎಸ್. ಟಿ.ಎ ಕಂದಾಯ ಜಿಲ್ಲಾ ದ್ವಿದಿನ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ  ಅವರು ಮಾತನಾಡಿದರು. ಹಿಡಿದಿಟ್ಟುಕೊಂಡ ಸೌಲಭ್ಯಗಳನ್ನು ತುರ್ತಾಗಿ ನೀಡಬೇ ಕೆಂದೂ, ವೇತನ ಪರಿಷ್ಕರಣೆ ಕ್ರಮಗಳನ್ನು ಕೂಡಲೇ ಆರಂಭಿಸಬೇಕೆಂದೂ ಅವರು ಆಗ್ರಹಿಸಿದರು. ಕೂತ್ತಾಟುಕುಳಂ ವಿಜಯಕುಮಾರ್ ತರಗತಿ ನಡೆಸಿದರು. ಜಿಲ್ಲಾ ಅಧ್ಯಕ್ಷ ಪಿ.ಟಿ. ಬೆನ್ನಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಜಿ.ಕೆ. ಗಿರೀಶ್ ಪ್ರಧಾನ ಭಾಷಣ ಮಾಡಿದರು. ಪದಾಧಿಕಾರಿಗಳಾದ ಜೋಮಿ ಟಿ. ಜೋಸ್, ಪಿ. ಜಲಜಾಕ್ಷಿ, ಪಿ.ಕೆ. ಪ್ರಭಾವತಿ, ಸಿ.ಎಂ. ವರ್ಗೀಸ್, ಸಿ.ಕೆ. ಅಜಿತ, ವಿಮಲ್ ಅಡಿಯೋಡಿ, ವಿ.ವಿ. ಶಿಹಾಬ್, ಬಿಜು ಅಗಸ್ಟಿನ್, ಜಿಲ್ಲಾ ಕಾರ್ಯದರ್ಶಿ ಕೆ. ಗೋಪಾಲಕೃಷ್ಣನ್, ಕೋಶಾಧಿಕಾರಿ ಪಿ. ಶ್ರೀಜ ಮಾತನಾಡಿದರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page