ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್, ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕ್ವಾರ್ಟರ್ಸ್ ಬಳಿ ನಿಲ್ಲಿಸಿದ್ದ ಬೈಕ್ ಹಾಗೂ ಸ್ಕೂಟರ್ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿದ್ಯಾನಗರ ಸಮೀಪದ ನ್ಯೂ ಕೋಪಾ ನೈಫ್ ರಸ್ತೆಯಲ್ಲಿರುವ ಕ್ವಾರ್ಟರ್ಸ್‌ನ  ಮುಂದೆ ನಿಲ್ಲಿಸಿದ್ದ ಈ ಎರಡು ವಾಹನ ನಿನ್ನೆ  ಬೆಳಿಗ್ಗೆ ೫ ಗಂಟೆ ವೇಳೆ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಬಗ್ಗೆ ನ್ಯೂ ಕೋಪಾದ ನೂರುದ್ದೀನ್ ಎಂಬವರು ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಎರಡು ದ್ವಿಚಕ್ರ ವಾಹನಗಳು ದೂರುಗಾರರಾದ ನೂರುದ್ದೀನ್‌ರ ಮಕ್ಕಳು ಚಲಾಯಿಸುವ ವಾಹನಗಳಾಗಿವೆ. 70,೦೦೦ ರೂ.ಗಳ ನಷ್ಟ ಉಂಟಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಕಿಗಾಹುತಿಯಾದ ಎರಡು ವಾಹನಗಳನ್ನು ಪೊಲೀಸರು ನಂತರ ಅಲ್ಲಿಂದ ವಿದ್ಯಾನಗರ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ.

You cannot copy contents of this page