ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕ ಮಹಾಸಭೆ ಹಾಗೂ ಮುಳ್ಳೇರಿಯ ವ್ಯಾಪಾರಿ ವೆಲ್ಫೇರ್ ಸೊಸೈಟಿಯ ೨೫ನೇ ವಾರ್ಷಿಕದ ಉದ್ಘಾಟನೆ ಇಂದು ಅಪರಾಹ್ನ ೩ ಗಂಟೆಗೆ ಮುಳ್ಳೇರಿಯ ಗಣೇಶ್ ಕಲಾಮಂದಿರದಲ್ಲಿ ನಡೆಯಲಿದೆ. ಮುಳ್ಳೇರಿಯ ವ್ಯಾಪಾರಿ ವೆಲ್ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆ ಹಾಗೂ 25ನೇ ವಾರ್ಷಿಕವನ್ನು ಕೆವಿವಿಇಎಸ್ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾದ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ವೆಲ್ಫೇರ್ ಸೊಸೈಟಿ ಅಧ್ಯಕ್ಷ ಸಖಾರಾಂ ಶೆಣೈ ಅಧ್ಯಕ್ಷತೆ ವಹಿಸುವರು. ಘಟಕದ ಅಧ್ಯಕ್ಷ ಗಣೇಶ ವತ್ಸ ಉಪಸ್ಥಿತರಿರುವರು. ವೆಲ್ಫೇರ್ ಸೊಸೈಟಿ ಕಾರ್ಯದರ್ಶಿ ಕೆ. ಪ್ರದೀಪ್ ಕುಮಾರ್ ವರದಿ ಮಂಡಿಸುವರು. ಕೋಶಾಧಿಕಾರಿ ಎಂ.ಎಸ್. ಹರಿಪ್ರಸಾದ್ ವಾರ್ಷಿಕ ಆಯ-ವ್ಯಯ ಮಂಡಿಸುವರು. ಜತೆ ಕಾರ್ಯದರ್ಶಿ ರಾಜು ಗ್ಯಾಲರಿ… ವರದಿ ವಾಚಿಸುವರು.
ಕೆವಿವಿಇಎಸ್ ಘಟಕ ಮಹಾಸಭೆ ಯನ್ನು ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶರೀಫ್ ಉದ್ಘಾಟಿಸುವರು. ಘಟಕದ ಅಧ್ಯಕ್ಷ ಗಣೇಶ್ ವತ್ಸ ಎನ್ ಅಧ್ಯಕ್ಷತೆ ವಹಿಸುವರು. ಪ್ರಧಾನ ಕಾರ್ಯದರ್ಶಿ ಶಶಿಧರನ್ ಸುಮಂಗಲಿ ವರದಿ ಮಂಡಿಸುವರು. ಕೋಶಾಧಿಕಾರಿ ಸದಾನಂದ ವಾರ್ಷಿಕ ಆಯ-ವ್ಯಯ ಮಂಡಿಸುವರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ, ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹಾಜಿ ಕುಂಜಾರ್, ಘಟಕ ಉಪಾಧ್ಯಕ್ಷರಾದ ಸಿ. ಕುಂಞಿರಾಮನ್, ಎಂ.ಎಸ್. ಹರಿ ಪ್ರಸಾದ್, ಕೆ.ಪಿ. ಸೂಫಿ, ಯೂತ್‌ವಿಂಗ್ ಅಧ್ಯಕ್ಷ ಅಬ್ದುಲ್ಲ ಹಮೀದ್, ವನಿತಾವಿಂಗ್ ಅಧ್ಯಕ್ಷೆ ಸಿಂಧು ಅಶೋಕನ್, ಯೂತ್ ವಿಂಗ್ ಕಾರ್ಯದರ್ಶಿ ವೇಣುಗೋಪಾಲನ್ ಲಿಯೋ ಮೊದಲಾದವರು ಉಪಸ್ಥಿತರಿರುವರು.