ಹೃದಯಾಘಾತದಿಂದ ನಿಧನ
ಬೋವಿಕ್ಕಾನ: ಇರಿಯಣ್ಣಿ ಸಮೀಪ ಬೇಪು ಶ್ರೀನಿಲಯದ ಅಣಿಲೆ ಗೋಪಾಲಕೃಷ್ಣ ಭಟ್ (80) ಹೃದಯಾಘಾತ ದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಕೃಷಿಕರಾಗಿದ್ದರು.
ಮೃತರು ಪತ್ನಿ ಪರಮೇಶ್ವರಿ ಭಟ್, ಮಕ್ಕಳಾದ ಎ. ಶಾಸ್ತ ಕುಮಾರ್ (ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ), ಎ. ಪ್ರೇಮ (ಮುಳ್ಳೇರಿಯ ಎಯುಪಿಎಸ್ ಅಧ್ಯಾ ಪಿಕೆ), ಅಳಿಯ ಡಾ| ಸೂರ್ಯ ನಾರಾ ಯಣ ಭಟ್ ( ನಿವೃತ್ತ ಪಶುವೈದ್ಯಕೀಯ ಶಸ್ತ್ರ ಚಿಕಿತ್ಸಕ), ಸೊಸೆ ಪ್ರಸೀಜ (ಪೇರಾಲ್ ಜಿಜೆಬಿಎಸ್ ಅಧ್ಯಾಪಿಕೆ), ಸಹೋದರ-ಸಹೋದರಿ ಯರಾದ ಶ್ಯಾಮ ಭಟ್ (ನಿವೃತ್ತ ಪ್ರಾಧ್ಯಾಪಕ), ನಾರಾಯಣ ಭಟ್ ( ಶಿಪ್ಪಿಂಗ್ ಕಾರ್ಪರೇಶನ್‌ನ ನಿವೃತ್ತ ಅಧಿಕಾರಿ), ವಿಷ್ಣು ಭಟ್(ನಿವೃತ್ತ ಪ್ರಾಧ್ಯಾಪಕ), ಸುಮತಿ ಭಟ್ ವೇಣೂರು, ಪುಷ್ಪಲೀಲಾ ಭಟ್ ಬಜೆ, ಕೃಷ್ಣ ಕುಮಾರಿ ಉಕ್ಕಿನಡ್ಕ (ನಿವೃತ್ತ ಅಧ್ಯಾಪಿಕೆ), ಪ್ರಸನ್ನ ಕುಮಾರಿ ತಿರುವನಂತಪುರ (ಪಿಡಬ್ಲ್ಯುಡಿ ನಿವೃತ್ತ ಅಧಿಕಾರಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.