ಕಾಸರಗೋಡು: ಲಾರಿ ಮತ್ತು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಂಟೈನರ್ ಲಾರಿಯ ಅಡಿಭಾಗದಲ್ಲಿ ಬೈಕ್ ಸಹಿತ ಸಿಲುಕಿಕೊಂಡ ಸವಾರರಿಬ್ಬರನ್ನು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಗರದ ಪ್ರೆಸ್‌ಕ್ಲಬ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ನಡೆದಿದೆ.
ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಾದ ಇರಿಯಣ್ಣಿ ನಿವಾಸಿಗಳಾದ ರಂಜಿಶ್ (35) ಮತ್ತು ಪ್ರಸಾದ್ (45)ಬೈಕ್ ಸಹಿತ ಲಾರಿಯ ಅಡಿಭಾಗದಲ್ಲಿ ಸಿಲುಕಿಕೊಂ ಡರು. ವಿಷಯ ತಿಳಿದು ಎಎಸ್‌ಟಿಒ ವಿನೋದ್ ರಾಮ್ ನೇತೃತ್ವದ ಕಾಸರ ಗೋಡು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಪೊಲೀಸರು ಮತ್ತು ಎಆರ್‌ಟಿಯ ವಿನ್‌ಜಿನ್ಸ್‌ನ ಸಹಾಯ ದೊಂದಿಗೆ ಸವಾರರಿಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಈ ರಕ್ಷಣಾ ಕಾರ್ಯಾ ಚರಣೆಯಲ್ಲಿ ಅಗ್ನಿಶಾಮಕದಳದ ಎಫ್‌ಆರ್‌ಒ ವೈಶಾಖ್, ಎಲ್.ಬಿ. ಉಮೇಶನ್, ಶೈಜು, ಅಜೀಶ್ ಕೆ.ಆರ್ ಮತ್ತು ಗಾರ್ಡ್‌ಗಳಾದ ಶ್ರೀಜಿತ್, ಸೋಬಿನ್ ಮತ್ತು ರಾಗೇಶ್ ಎಂಬಿವರು ಒಳಗೊಂಡಿದ್ದರು.