ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಪದಗ್ರಹಣ
ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಜೇಶ್ವರ ಇದರ ವಾರ್ಷಿಕ ಮಹಾಸಭೆ ಹೊಸಂ ಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆ ಯಿತು. ಸಮಿತಿಯ ಅಧ್ಯಕ್ಷ ನ್ಯಾಯ ವಾದಿ ನವೀನ್ರಾಜ್ ಕೆ.ಜೆ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಗೌರವಾಧ್ಯಕ್ಷರಾಗಿ ಹೈಮೇಶ್ ಬಿ.ಎಂ. ಕಟ್ಟೆಬಜಾರ್, ಅಧ್ಯಕ್ಷರಾಗಿ ಪದ್ಮನಾಭ ಕಡಪ್ಪುರ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಹೆಗ್ಡೆ, ಕೋಶಾಧಿಕಾರಿಯಾಗಿ ನವೀನ್ ಅಡಪ್ಪ ಹೊಸಬೆಟ್ಟು, ಪ್ರಧಾನ ಸಂಚಾಲಕರಾಗಿ ನವೀನ್ರಾಜ್ ಕೆ.ಜೆ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ ಮಾಡ, ಲೆಕ್ಕಪರಿಶೋಧಕ ರಾಗಿ ರಮೇಶ್ ಕಟ್ಟೆಬಜಾರ್ ಆಯ್ಕೆ ಯಾದರು. ಉಪಸಮಿತಿಗಳನ್ನು ರಚಿಸ ಲಾಯಿತು. ಅಗೋಸ್ತ್ ೨೭ರಿಂದ ೩೦ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗಣೇಶೋತ್ಸವ ನಡೆಯಲಿದೆ. ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ ವಂದಿಸಿದರು.