ಜಿಲ್ಲೆಯ ಹಲವು ಕಡೆ ಕಾಲ್ನಡೆ ಪ್ರಯಾಣಿಕರಿಗೆ ರಸ್ತೆ ದಾಟಲು ಅಸೌಕರ್ಯ: ಫೂಟ್ ಓವರ್ ಬ್ರಿಡ್ಜ್‌ಗೆ ಬಿಜೆಪಿ ಮನವಿ
ಮಂಜೇಶ್ವರ: ಜಿಲ್ಲೆಯ ಹಲವು ಕಡೆಗಳಲ್ಲಿ ಕಾಲ್ನಡೆ ಸಂಚಾರಿಗಳಿಗೆ ರಸ್ತೆ ದಾಟಲು ಅಸೌಕರ್ಯವಿರುವು ದನ್ನು ಮನಗಂಡು ಬಿಜೆಪಿ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದೆ. ಕಾಸರಗೋಡು ಅಡ್ಕತ್ತಬೈಲು, ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತೀ ಕ್ಷೇತ್ರ ಬಳಿ, ಬಂಗ್ರಮಂಜೇಶ್ವರದಲ್ಲಿ ರಸ್ತೆ ಅಡ್ಡದಾಟಲು ಸಮಸ್ಯೆಯಿದ್ದು, ಇಲ್ಲಿ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಂಡದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಉಪಾಧ್ಯಕ್ಷ ವಿಜಯಾ ರೈ, ಮಂಗಳೂರು ಸಂಸದ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.