ಬೈಕ್ ಕಳವು ಆರೋಪಿ ಸೆರೆ

ಮಂಜೇಶ್ವರ: ಕಳವುಗೈದ  ಬೈಕ್ ಸಹಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.  ದೇರಳಕಟ್ಟೆ ನಿವಾಸಿ ಹುಸೈನ್ ಸೈದ್ (೨೫) ಬಂಧಿತ ಆರೋಪಿ. ಹೊಸಬೆಟ್ಟು ಪೊಕ್ಕಿ ಎಂಬಲ್ಲಿನ ಅಬ್ದುಲ್ ಬಷೀರ್‌ರ  ಮನೆ ಬಳಿ  ನಿಲ್ಲಿಸಿದ್ದ  ಅವರ ಸಂಬಂಧಿಕರ ಬೈಕ್  ಈ ತಿಂಗಳ ೧೫ರಂದು ರಾತ್ರಿ ಕಳವಿಗೀಡಾಗಿತ್ತು. ಈಬಗ್ಗೆ ಅಬ್ದುಲ್ ಬಷೀರ್ ಪೊಲೀಸರಿಗೆ ದೂರು ನೀಡಿದ್ದರು. ಈಬಗ್ಗೆ ತನಿಖೆ ನಡೆಸಿದ ಪೊಲೀಸರು ಮೇಲಿನ ತಲಪ್ಪಾಡಿ ಯಿಂದ  ಸಂಶಯದ ಮೇರೆಗೆ ಹುಸೈ ನ್ ಸೈದ್‌ನನ್ನು ಕಸ್ಟಡಿಗೆ ತೆಗೆದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ಬೈಕ್  ಕಳವುಗೈದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

RELATED NEWS

You cannot copy contents of this page