ಕುಂಬಳೆ: ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಅಳವಡಿಕೆ

ಕುಂಬಳೆ:  ಕುಂಬಳೆಯಲ್ಲಿರುವ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ  ಮೆಡಿಫೈತ್ ಟ್ರಸ್ಟ್‌ನ ಸಹಾಯದೊಂದಿಗೆ ಸಿಟಿ ಸ್ಕ್ಯಾನ್ ವ್ಯವಸ್ಥೆ ಅಳವಡಿಸಲಾಯಿತು. ಇದನ್ನು  ಕಾಸರಗೋಡು ಸರ್ಕಲ್ ಸಹಕಾರಿ ಯೂನಿಯನ್, ಕೇರಳ ತುಳು ಅಕಾ ಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಆಸ್ಪತ್ರೆ ಸಂಘದ ಅಧ್ಯಕ್ಷ ರಘುದೇವನ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಎಂ. ಸುಮತಿ, ಸಹಕಾರಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆ. ನಾಗೇಶ್, ಡಾ| ಮಹಮ್ಮದ್ ಶರೀಫ್, ಡಾ| ಸರ್ವೇಶ್ವರ ಭಟ್, ನಿರ್ದೇಶಕರಾದ ಟಿ.ಎಂ.ಎ. ಕರೀಂ, ಶಂಕರನ್, ಭರತ್ ಕುಮಾರ್, ಜಯಚಂದ್ರನ್ ಶುಭ ಕೋರಿ ದರು.  ಮೆಡಿಫೈತ್‌ನ ಡಾ| ಅಭಿಲಾಷ್ ಸ್ವಾಗತಿಸಿ, ಆಸ್ಪತ್ರೆ ಸಂಘದ ಕಾರ್ಯ ದರ್ಶಿ ಪ್ರದೀಪ್ ಕೆ ವಂದಿಸಿದರು

You cannot copy contents of this page