ಹಾನಿಗೊಂಡು ರಸ್ತೆಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಢಿಕ್ಕಿ: ಸವಾರನಿಗೆ ಗಂಭೀರ

ಕಾಸರಗೋಡು: ಹಾನಿಗೊಂಡು ರಸ್ತೆಯಲ್ಲಿ ಸಿಲುಕಿಕೊಂಡ ಲಾರಿಯ ಹಿಂಭಾಗಕ್ಕೆ ಸ್ಕೂಟರ್ ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯವುಂಟಾ ಗಿದೆ. ಯುವಕನನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ೫ ಗಂಟೆ ವೇಳೆ ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ  ಪಳ್ಳಿಕ್ಕೆರೆಯಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರು ಭಾಗಕ್ಕೆ ಲಾರಿ  ಸಂಚರಿಸುತ್ತಿತ್ತು. ಪಳ್ಳಿಕ್ಕೆರೆಗೆ ತಲುಪಿದಾಗ  ಹಾನಿಗೊಂಡು ರಸ್ತೆ ಮಧ್ಯೆ ನಿಂತಿತು. ಬಳಿಕ ಚಾಲಕ ಹಾಗೂ ಕ್ಲೀನರ್ ಸೇರಿ ದುರಸ್ತಿ ನಡೆಸುತ್ತಿದ್ದ ಮಧ್ಯೆ ತಲುಪಿದ ಸ್ಕೂಟರ್ ಲಾರಿಗೆ ಢಿಕ್ಕಿ ಹೊಡೆದಿದೆ. ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಸ್ಕೂಟರ್‌ನ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಗಾಯಗೊಂಡ ಸವಾರನನ್ನು 10 ನಿಮಿಷದ ಬಳಿಕ ಆ ದಾರಿಯಾಗಿ ಬಂದ ವಾಹನವೊಂದಲ್ಲಿ ಹತ್ತಿಸಿ ಉದುಮದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು. ಈ ಮಧ್ಯೆ ಪೊಲೀಸರು ಸ್ಥಳಕ್ಕೆ ತಲುಪಿದರು. ಗಾಯ ಗಂಭೀರವಾದ ಹಿನ್ನೆಲೆಯಲ್ಲಿ ಬಳಿಕ ಯುವಕನನ್ನು ಕಾಸರಗೋಡಿನ ಆಸತ್ರೆಗೆ ದಾಖಲಿಸಲಾಗಿದೆ. ಪೊಲೀಸರ ತನಿಖೆಯಲ್ಲಿ ಸ್ಕೂಟರ್‌ನ ಆರ್‌ಸಿ ಮಾಲಕಿ ಓರ್ವೆ ಮಹಿಳೆಯಾಗಿ ದ್ದಾರೆಂದು ಪತ್ತೆಹಚ್ಚಲಾಗಿದೆ. ಗಾಯಗೊಂಡ ಯುಕನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭಿಸಬೇಕಾಗಿದೆ.

RELATED NEWS

You cannot copy contents of this page