ರಾಷ್ಟ್ರೀಯ ಹೆದ್ದಾರಿ: ಕುಂಬಳೆ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್‌ಆಗಿರುವ ತಲಪ್ಪಾಡಿ-ಚೆಂಗಳ  ರಸ್ತೆಯಲ್ಲಿರುವ್ಲ ಕುಂಬಳೆ ಸೇತುವೆಯನ್ನು ಇಂದು ವಾಹನ ಸಂಚಾರಕ್ಕಾಗಿ ತೆರೆದುಕೊಡ ಲಾಯಿತು.  ಇದರಿಂದ ಎರಡೂ ಭಾಗಗಳಿಗೆ  ವಾಹನಗಳಿಗೆ ಸುಗಮವಾಗಿ   ಸಂಚರಿಸಲು ಸೌಕರ್ಯ ಉಂಟಾಗಿದೆ.  ಈ ಸೇತುವೆ ಸಮೀಪವಿರುವ  ಹಳೆ ಸೇತುವೆಯನ್ನು  ಮುರಿದು ತೆಗೆದು  ದ್ವಿಪಥ ರಸ್ತೆಗೆ  ಸೌಕರ್ಯವಾಗುವ ರೀತಿಯಲ್ಲಿ ಮತ್ತೊಂದು ಸೇತುವೆ ಯನ್ನು   ನಿರ್ಮಿಸಲು  ಆ ಮೂಲಕ  ದ ವಾಹನ ಸಂಚಾರಕ್ಕೆ ಹೊಸ ಸೇತುವೆ ಮೂಲಕ ನಡೆಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ತಲಪ್ಪಾಡಿ-ಚೆಂಗಳ ಒಂದನೇ ರೀಚ್ ನಲ್ಲಿ ಏಳು ಸೇತುವೆಗಳಿವೆ. ಮಂಜೇಶ್ವರ-ಹೊಸಬೆಟ್ಟು, ಮಂಜೇಶ್ವರ, ಮಂಜೇಶ್ವರ ಚೆಕ್‌ಪೋಸ್ಟ್, ಕುಕ್ಕಾರು, ಶಿರಿಯ, ಕುಂಬಳೆ, ಮೊಗ್ರಾಲ್ ಎಂಬಿಡೆಗಳಲ್ಲಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ನಿರ್ಮಾಣ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ಹಲವುಕೊನೆಯ ಹಂತದಲ್ಲಿವೆ. ಈ ಭಾಗಗಳ  ಷಷ್ಪಥ  ಹೆದ್ದಾರಿಯು ಅಂತಿಮ ಹಂತಕ್ಕೆ ತಲುಪಿದೆ. ಪ್ರಧಾನ ಪೇಟೆಗಳಲ್ಲಿ ಇನ್ನು ಕಾಮಗಾರಿ ಪೂರ್ತಿಗೊಳ್ಳಲು ಬಾಕಿಯಿದೆ. ಕಾಸರಗೋಡಿನಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟಿರುವ  ಫ್ಲೈ ಓವರ್ ನಿರ್ಮಾಣ ಅಂತಿಮ ಹಂತದಲ್ಲಿದೆ. ನಿರ್ಮಾಣ ಚಟುವಟಿಕೆ ತ್ವರಿತಗತಿಯಲ್ಲಿ ಆರಂಭಿಸಿರುವಾಗಲೇ ಸಾರಿಗೆ ಅಡಚಣೆ ತೀವ್ರಗೊಂಡಿರುವುದಾಗಿ ಆರೋಪಗಳು ಕೇಳಿಬಂದಿವೆ.

You cannot copy contents of this page