ಎಸ್‌ಎಫ್‌ಐ ಬೆದರಿಕೆಗೆ ರಾಜ್ಯಪಾಲ ಸವಾಲು: ಆರಿಫ್ ಮುಹಮ್ಮದ್ ಖಾನ್ ನಾಳೆ ಕಲ್ಲಿಕೋಟೆಗೆ: ವಿ.ವಿ. ಅತಿಥಿಗೃಹದಲ್ಲಿ ವಾಸ್ತವ್ಯ

ತಿರುವನಂತಪುರ: ವಿಶ್ವವಿದ್ಯಾಲ ಯಗಳಲ್ಲಿ ರಾಜ್ಯಪಾಲರನ್ನು ಕಾಲೂರಲು ಬಿಡಲಾರೆವೆಂದು ಎಸ್‌ಎಫ್‌ಐಯ ಬೆದರಿಕೆಯನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಒಂದು ಸವಾಲಾಗಿ ತೆಗೆದುಕೊಂಡಿದ್ದಾರೆ.

ನಾಳೆ ಕಲ್ಲಿಕೋಟೆಗೆ ತಲುಪುವ ರಾಜ್ಯಪಾಲ ಕಲ್ಲಿಕೋಟೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ರಾಜ್ಯಪಾಲ ಈ ಹಿಂದೆ ಸರಕಾರದ ಅತಿಥಿಗೃಹದಲ್ಲಿ ತಂಗಲು ನಿರ್ಧರಿಸಿದ್ದರು. ಎಸ್‌ಎಫ್‌ಐಯಿಂದ ಬಂದ ಬೆದರಿಕೆಯನ್ನು ಸವಾಲಾಗಿ ಪರಿಗಣಿಸಿ ತಮ್ಮ ವಾಸ್ತವ್ಯ ಸ್ಥಳವನ್ನೂ ಬದಲಾಯಿಸಿರುವುದಾಗಿ ಹೇಳಲಾಗುತ್ತಿದೆ. ನಾಳೆಯಿಂದ ೧೮ರವರೆಗೆ ರಾಜ್ಯಪಾಲ ಕಲ್ಲಿಕೋಟೆಯಲ್ಲಿರುವರು. ಎಸ್‌ಎಫ್‌ಐಯ ಬೆದರಿಕೆಯನ್ನು  ಪರಿಗಣಿಸಿ ವಿ.ವಿ, ಅತಿಥಿಗೃಹ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗುವುದು. ಇತ್ತೀಚೆಗೆ ದೆಹಲಿಗೆ ತೆರಳಲೆಂದು ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ರಾಜ್ಯಪಾಲರನ್ನು ಎಸ್‌ಎಫ್‌ಐ ಕಾರ್ಯಕರ್ತರು ತಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಪಾಲ ರೊಂದಿಗೆ ಭದ್ರತಾ ಅಧಿಕಾರಿಗಳು ಇದ್ದರೂ ಕೂಡಾ ಪ್ರತಿಭಟನೆಗಳನ್ನು ತಡೆಯಲು ಸಾಧ್ಯವಾಗಿರಲಿಲ್ಲ.

RELATED NEWS

You cannot copy contents of this page