ಹೆಚ್ಚುತ್ತಿರುವ ಕೋವಿಡ್: ಜಾಗ್ರತೆ ವಹಿಸಲು ಕೇಂದ್ರ ಕರೆ

ದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಹೊಸತಳಿ ಜೆ.ಎನ್.೧ ಆರ್ಭಟ ಶುರುಮಾಡಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮುಂಬರುವ ಹಬ್ಬಗಳ ಬಗ್ಗೆ ನಿಗಾ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು. ತೀವ್ರತರವಾದ ಉಸಿರಾಟ ತೊಂದರೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕೆಂದು ತಿಳಿಸಿದೆ. ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಪರೀಕ್ಷೆ ಮಾಡಲು ಕೇಂದ್ರ ಸೂಚಿಸಿದೆ.

You cannot copy contents of this page