ಮಂಡಲಪೂಜೆ ನಾಳೆ: ಶಬರಿಮಲೆಗೆ ಭಕ್ತ ಪ್ರವಾಹ

ಶಬರಿಮಲೆ: ಶ್ರೀ ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನಾಳೆ ನಡೆಯಲಿರುವಂತೆಯೇ ಶಬರಿಮಲೆಗೆ ಭಕ್ತರ ಪ್ರವಾಹ ಮುಂದುವರಿ ಯುತ್ತಿದೆ. ನಿನ್ನೆ ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಕ್ಷೇತ್ರ ದರ್ಶನ ನಡೆಸಿದ್ದಾರೆ. ಇಂದು ಕೂಡಾ ಭಕ್ತರ ಭಾರೀ ಸಂದಣಿ ಕಂಡುಬಂದಿದೆ. ಇಂದು ಹದಿನೆಂಟು ಮೆಟ್ಟಿಲೇರಲು ಕಾದುನಿಂತ ತೀರ್ಥಾಟಕರ ಸರದಿ ಶಬರಿಪೀಠವರೆಗೆ ಸಾಗಿದೆ. ಭಕ್ತರ ಸಂದಣಿ ಪರಿಗಣಿಸಿ ಪಂಪಾದಲ್ಲೇ ನಿಯಂತ್ರಣ ಹೇರಲಾಗಿದೆ. ಇದೇ ವೇಳೆ ಅರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಹೊರಟ ತಂಗಅಂಗಿ ಶೋಭಾಯಾತ್ರೆ ಇಂದು ಸನ್ನಿದಾನಕ್ಕೆ ತಲುಪಲಿದೆ. ಬಳಿಕ ತಂಗಅಂಗಿಯನ್ನು ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸಿ ಸಂಜೆ ದೀಪಾರಾಧನೆ ನಡೆಯಲಿದೆ. ನಾಳೆ ಬೆಳಿಗ್ಗೆ ೧೦.೩೦ರಿಂದ ೧೧ ಗಂಟೆ ಮಧ್ಯೆ ಮಂಡಲಪೂಜೆ ನಡೆಯಲಿರುವುದು.

You cannot copy contents of this page