ಖಾಸಗಿ ಶಾಲೆಯ ವ್ಯಾನ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ: ತಪ್ಪಿದ ಭಾರೀ ದುರಂತ

ಮಧೂರು:  ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಶಾಲೆಯ ವ್ಯಾನ್ ಅಪಘಾತಕ್ಕೀ ಡಾಯಿತು. ಕೋಳಿಯಡ್ಕಂ ಅಪ್ಸರ ಶಾಲೆಯ ವ್ಯಾನ್ ಅಪಘಾತಕ್ಕೀಡಾ ಗಿದೆ. ಇಂದು ಬೆಳಿಗ್ಗೆ ಎಂಟೂವರೆಗೆ ಮಧೂರು, ಕುಂಜಾರ್ ಕೊರತ್ತಿಕುಂಡ್‌ನಲ್ಲಿ ಅಪಘಾತ ಸಂಭವಿಸಿದೆ. ಹನಿ ಮಳೆಗೆ ನಿಯಂತ್ರಣ ತಪ್ಪಿದ ವ್ಯಾನ್ ರಸ್ತೆ ಬದಿಯ ಹೊಂಡದತ್ತ ಚಲಿಸಿದೆ. ಈ ವೇಳೆ ಅಲ್ಲಿದ್ದ ಅಕೇಶಿಯಾ ಮರಕ್ಕೆ ಢಿಕ್ಕಿ ಹೊಡೆದು ನಿಂತ ಕಾರಣ ಭಾರೀ ದುರಂತ ತಪ್ಪಿದೆ.

ಅಪಘಾತದಿಂದ ೧೨ರಷ್ಟು ಮಕ್ಕಳಿಗೆ ಸಣ್ಣಪುಟ್ಟ ಗಾಯ ಉಂಟಾಗಿದೆ. ಇವರಿಗೆ ವಿದ್ಯಾನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.  ಅಪಘಾತಕ್ಕೀಡಾದ ವ್ಯಾನ್‌ನಲ್ಲಿ ಇದ್ದ ಮಕ್ಕಳ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿದ್ದಾರೆ.

RELATED NEWS

You cannot copy contents of this page