ಮನೆ ಹಿತ್ತಿಲಿನಿಂದ ಶ್ರೀಗಂಧ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ
ಬೇಡಗಂ: ಮನೆ ಹಿತ್ತಿಲಿನಿಂದ ಶ್ರೀಗಂಧ ಮರ ಕಡಿದು ಸಾಗಾಟ ನಡೆಸುತ್ತಿದ್ದಾಗ ನಾಲ್ಕು ಮಂದಿ ತಂಡವನ್ನು ಪೊಲೀಸರು ಕೈಯ್ಯಾರೆ ಸೆರೆಹಿಡಿದಿದ್ದಾರೆ. ಕುಂಡಂಕುಳಿ ಲಿಂಗತ್ತೋಡ್‌ನ ಮಧುಸೂದನನ್ (೪೩), ಕುಂಡಂಕುಳಿಯ ಶಬೀರ್ (೨೨), ಕುಂಡಂಕುಳಿ ಚಿರಪೈಕ್ಕದ ಇಬ್ರಾಹಿಂ ಬಾದುಷ (೨೪) ಕುನ್ನುಚ್ಚಿಯ ಎಚ್. ರಾಜೇಶ್ (೨೨) ಎಂಬಿವರನ್ನು ಬೇಡಗಂ ಎಸ್‌ಐ ಗಂಗಾಧರನ್ ನೇತೃತ್ವದ ಪೊಲೀಸ್ ತಂಡ ಸೆರೆಹಿಡಿದಿದೆ. ಆರೋಪಿಗಳಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಆರೋಪಿಗಳು ಸಂಚರಿಸುತ್ತಿದ್ದ ಬೈಕ್, ಶ್ರೀಗಂಧ ಹಾಗೂ ಆಯುಧಗಳನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.
ನಿನ್ನೆ ಮುಂಜಾನೆ ಎರಿಂಞಿಪುಳ ಪೊಲಿಯಂಕುನ್ನುವಿನ ಬಾಲಕೃಷ್ಣನ್ ಎಂಬವರ ಹಿತ್ತಿಲಿನಿಂದ ಆರೋಪಿಗಳು ೩೦ ವರ್ಷ ಹಳೆಯದಾದ ಶ್ರೀಗಂಧ ಮರವನ್ನು ಕಡಿದು ಸಾಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಾಗರಿಕರು ನೀಡಿದ ಮಾಹಿತಿ ಮೇರೆಗೆ ಎಸ್.ಐ ನೇತತ್ವದ ಪೊಲೀಸ್ ತಂಡ ತಲುಪಿ ಆರೋಪಿಗಳನ್ನು ಕೈಯಾರೆ ಸೆರೆಹಿಡಿದಿದೆ.