ತಮಿಳುನಾಡಿನಲ್ಲಿ ಧಾರಾಕಾರ ಮಳೆ ಓರ್ವೆ ಬಾಲಕಿ ಮೃತ್ಯು

ಚೆನ್ನೈ: ತಮಿಳುನಾಡಿನಲ್ಲಿ ಮತ್ತೆ ಧಾರಾಕಾರ ಮಳೆ ಸುರಿಯ ತೊಡಗಿದ್ದು ಇದರಿಂದ ವ್ಯಾಪಕ ನಾಶನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ. ಚೆನ್ನೈ ಸಹಿತ ಹತ್ತು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ೨.೨ ಜಿಲ್ಲೆಗಳಲ್ಲಿ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯಿಂದ ಉಂಟಾದ ದುರ್ಘಟನೆ ಯಿಂದ ರಾಜ್ಯದಲ್ಲಿ ಓರ್ವ ಬಾಲಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ತಿರುವಾಂ ಕೂರ್‌ನಲ್ಲಿ ಮನೆಯ ಗೋಡೆ ಕುಸಿದು ಬಾಲಕಿ ಮೃತಪಟ್ಟಿದ್ದಾಳೆ. ಮಳೆಯ ಜೊತೆ ಬಲವಾದ ಗಾಳಿ ಬೀಸುವ ಸಾಧ್ಯತೆ ಯೂ ಇದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಮುಂಜಾಗ್ರತಾ ಕ್ರಮವೆಂಬಂತೆ ವೈಗಾ, ಚೆಂಬಾರಬಾಕಂ ಅಣೆಕಟ್ಟುಗಳಿಂದ ನೀರು ಹೊರಕ್ಕೆ ಬಿಡಲಾಗಿದೆ. ಕಡಲೂರು, ತಿರುವಣ್ಣಾಮಲೈ, ವೆಲ್ಲೂರು ಸಹಿತ ೧೦ ಜಿಲ್ಲೆಗಳಲ್ಲಿ ಹಾಗೂ ಪುದುಚ್ಚೇರಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇಂದು ರಜೆಯಾಗಿದೆ.

RELATED NEWS

You cannot copy contents of this page