ಕಾಸರಗೋಡು: ಮಾಯಿಪ್ಪಾಡಿ ಯಲ್ಲಿರುವ ಕಾಸರಗೋಡು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಅತೀ ಹಿಂದುಳಿದ ಕೊರಗ ಜನಾಂಗದವರಿಗಾಗಿ ಎರಡು ಸೀಟು ಮೀಸಲಿಡಬೇಕೆಂದು ಆದಿವಾಸಿ ಕೊರಗ ಜನಾಂಗದ ಮುಖಂಡ ಸಂಜೀವ ಪುಳ್ಕೂರು ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿಯವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ. ಮನವಿಯನ್ನು ಶಿಕ್ಷಣ ನಿರ್ದೇಶಕ ರಿಗೂ, ಶಾಸಕರಿಗೂ ನೀಡಿದ್ದಾರೆ.
ಹಿಂದುಳಿದ ಭಾಗವಾದ ಈ ಜನಾಂಗದವರು ಎಸ್.ಟಿ. ವಿಭಾಗಕ್ಕೆ ಸೇರಿದ್ದು, ಈ ವಿಭಾಗದಲ್ಲಿ ಇತರ ಸಮುದಾಯದೊಂದಿಗೆ ಸ್ಪರ್ಧಿಸಿ ಸೀಟು ಗಿಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಸಮುದಾಯದ ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ಕಲಿತ ವಿದ್ಯಾರ್ಥಿಗಳಿಗೆ ಅಧ್ಯಾಪಕ ತರಬೇತಿ ಪಡೆಯಲು ಕನಿಷ್ಟ ಎರಡು ಸೀಟು ಕನ್ನಡ ಮಾಧ್ಯಮದಲ್ಲಿ ಮೀಸಲಿಡಬೇಕೆಂದು ಸಂಜೀವ ಪುಳ್ಕೂರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈಗ ಡಯಟ್‌ನಲ್ಲಿ ಕನ್ನಡ ಮಾಧ್ಯಮಕ್ಕೆ 44 ಸೀಟುಗಳು ಮಾತ್ರವಿದೆ. ಇನ್ನು ಎರಡುಹೆಚ್ಚುವರಿಯಾಗಿ ಮಾಡಿ ಕೊರಗ ಸಮುದಾಯದವರಿಗೆ ಮೀಸಲಿಡಲು ಆಗ್ರಹಿಸಲಾಗಿದೆ.