ಜ್ವರ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಕಾರ್ಮಿಕ ಸಾವು

ಕಾಸರಗೋಡು: ಜ್ವರ ತಗಲಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದ ಕರ್ನಾಟಕ ನಿವಾಸಿಯಾದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಲತಃ ಕರ್ನಾಟಕ  ಬಳ್ಳಾರಿ ನಿವಾಸಿ ಹಾಗೂ ಈಗ ಕಾಸರಗೋಡು ಪಾರಕಟ್ಟೆ ಏರ್ ಕ್ಯಾಂಪ್ ರಸ್ತೆ ಬಳಿಯ ಕೃಷ್ಣಕೃಪಾದಲ್ಲಿ ವಾಸಿಸುತ್ತಿರುವ ಕರ್ನಾಟಕದ ವಲಸೆ ಕಾರ್ಮಿಕ ಬಸವರಾಜ್ (27) ಸಾವನ್ನಪ್ಪಿದ ವ್ಯಕ್ತಿ. ಅಸೌಖ್ಯ ನಿಮಿತ್ತ ಇವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಸಾವನ್ನಪ್ಪಿದ್ದಾರೆ.

You cannot copy contents of this page