ಬದಿಯಡ್ಕ: ಇಲ್ಲಿಗೆ ಸಮೀಪದ ಬೀಜಂತಡ್ಕದಲ್ಲಿ ಎರಡು ಬಸ್‌ಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ಮೊನ್ನೆ ರಾತ್ರಿ 8 ಗಂಟೆಗೆ ಅಪಘಾತವುಂ ಟಾಗಿತ್ತು. ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬದಿಯಡ್ಕದತ್ತ ತೆರಳುತ್ತಿದ್ದ ಖಾಸಗಿ ಬಸ್ ಪರಸ್ಪರ ಢಿಕ್ಕಿ ಹೊಡೆದಿದ್ದು ಬಸ್‌ಗಳಲ್ಲಿದ್ದ ಪ್ರಯಾಣಿಕರಾದ ಸತೀಶ್ (41), ಅಬ್ದುಲ್ ರಶೀದ್ (55), ಅಬೂಬಕರ್ (50), ಮಿಶಾಲ್ (5) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
