ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಸಮಸ್ಯೆ ಸೌಕರ್ಯ ಕೊರತೆ: ರಸ್ತೆ ಬದಿ ಪಾರ್ಕಿಂಗ್

ಕಾಸರಗೋಡು: ವಾಹನಗಳು ತುಂಬಿ ತುಳುಕುತ್ತಿರುವ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆ ಸಮಸ್ಯೆ ಉಂಟಾಗಿದೆ. ನಿಲ್ದಾಣದೊಳಗೆ ಮಾತ್ರವಲ್ಲ ರೈಲು ನಿಲ್ದಾಣ ರಸ್ತೆ ಬದಿಯೂ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದು ವಾಹನ ಸವಾರರಿಗೆ, ಕಾಲ್ನಡೆ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಸಾರಿಗೆ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿರುವಂತೆ ವಾಹನಗಳ ದಟ್ಟಣೆ ಸವಾಲು ಒಡ್ಡುತ್ತಿದೆ. ವಾಹನ ನಿಲುಗಡೆಗೆ ಸ್ಥಳ ನಿಗದಿ ಪಡಿಸಿದ್ದರೂ ವಾಹನಗಳ ದಟ್ಟಣೆಯಿಂದ ಆ ಸ್ಥಳ ಸಾಕಾಗದೆ ಇತರ ಕಡೆಗಳಲ್ಲೂ ಅಡ್ಡಾದಿಡ್ಡಿ ನಿಲುಗಡೆಗೊಳಿಸಲಾಗುತ್ತಿದ್ದು, ಇದು ಸಮಸ್ಯೆಗೆ ಕಾರಣವಾಗುತ್ತಿದೆ.

ಅಧಿಕಾರಿಗಳ ನಿರ್ದೇಶಗಳನ್ನು ಅವಗಣಿಸಿ ನಿಲುಗಡೆಗೊಳಿಸುತ್ತಿರುವುದು, ಸ್ಥಳೀಯಾಡಳಿತ ಸಂಸ್ಥೆಗಳ  ಅನಾಸಕ್ತಿ ಮೊದಲಾದವುಗಳಿಂದ ವಾಹನ ನಿಲುಗಡೆ ಇಲ್ಲಿ ಸಮಸ್ಯೆಯಾಗುತ್ತಿದೆ.

ಇದೇ ವೇಳೆ ವಾಹನ ಪಾರ್ಕಿಂಗ್‌ಗಾಗಿ ರೈಲ್ವೇ ಅಪರಿಮಿತ ಶುಲ್ಕ ವಸೂಲು ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ. ಇದರಿಂದಾಗಿ ಕೆಲವರು ಸಿಕ್ಕಿದ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ತೆರಳುತ್ತಾರೆ. ಕೆಲವರು ಸ್ಥಳ ಹುಡುಕಿ ಸುತ್ತಾಡುತ್ತಿರುವಾಗ ರೈಲು ತನ್ನ ಪ್ರಯಾಣ ಮುಂದುವರಿಸಿರುತ್ತದೆ. ಅಲ್ಲದೆ ಪ್ರಥಮವಾಗಿ ಬಂದು ನಿಲುಗಡೆಗೊಳಿಸಿ ತೆರಳಿದವರು ಮತ್ತೆ ಬಂದು ವಾಹನವನ್ನು ತೆಗೆಯಲಾಗದ ಸ್ಥಿತಿಯೂ ಇದೆ. ಇದಕ್ಕೆಲ್ಲಾ ಪರಿಹಾರ ಉಂಟಾಗಬೇಕಾಗಿದೆ.

RELATED NEWS

You cannot copy contents of this page