ಜೆರ್ಸಿಯ ಬಗೆಗಿನ ವಿವಾದ: ಕುಂಡಂಗುಳಿಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ

ಕಾಸರಗೋಡು: ಕ್ರೀಡಾ ವಸ್ತ್ರದ ಬಗ್ಗೆ ಉಂಟಾದ ವಿವಾದದ ಮುಂದುವರಿಕೆಯಾಗಿ ಕುಂಡಂಗು ಳಿಯಲ್ಲಿ ಪ್ಲಸ್‌ವನ್, ಪ್ಲಸ್‌ಟು ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಸಂಭವಿಸಿದೆ. ಕೊನೆಗೆ ಸ್ಥಳೀಯರು ಮಧ್ಯೆ ಪ್ರವೇಶಿಸಿದಾಗ ಅವರತ್ತ ವಿದ್ಯಾರ್ಥಿಗಳು ತಿರುಗಿದ್ದಾರೆ. ನಿನ್ನೆ ಕುಂಡಂಗುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ಪೋರ್ಟ್ಸ್ ನಡೆದಿತ್ತು. ಇದಕ್ಕಾಗಿ ಕೆಲವು ವಿದ್ಯಾರ್ಥಿಗಳು ವಿಭಿನ್ನ ವಸ್ತ್ರ ಧರಿಸಿದ್ದರು. ಇದನ್ನು ಶಾಲಾ ಅಧಿಕಾರಿಗಳು ತಡೆದರು. ಇದರಿಂದಾಗಿ ಕುಂಡಂಗುಳಿ ಪೇಟೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ಸಂಭವಿಸಿದೆ.  ಚಾಲಕರು, ಸ್ಥಳೀಯರು ಘರ್ಷಣೆ ತಡೆಯಲು ಯತ್ನಿಸಿದಾಗ  ಅವರ ವಿರುದ್ಧ ವಿದ್ಯಾರ್ಥಿಗಳು ಜಗಳಕ್ಕೆ ಮುಂದಾ ದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ವಿದ್ಯಾರ್ಥಿಗಳನ್ನು ಬೆದರಿಸಿ ಓಡಿಸಿದರೆನ್ನಲಾಗಿದೆ.

RELATED NEWS

You cannot copy contents of this page