ಕುಂಬಳೆ: ಮನೆಯಿಂದ ಮದ್ಯ ಹಾಗೂ ಹಣ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಯಾದ ಮನೆ ಮಾಲಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿಯಾದ ಕುಂಬಳೆ ಕುಂಟಂಗೇರಡ್ಕ ಲಕ್ಷ್ಮಿ ನಿವಾಸ್‌ನ ಪ್ರಭಾಕರನ್ ಯಾನೆ ಅಣ್ಣಿ ಪ್ರಭಾಕರ (52) ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.
ಮನೆಯಲ್ಲಿ ಮದ್ಯ ದಾಸ್ತಾನಿರಿಸಲಾಗಿದೆ ಎಂಬ ಮಾಹಿತಿಯಂತೆ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನಿರ್ದೇಶ ಪ್ರಕಾರ ಎಸ್‌ಐ ಕೆ. ಶ್ರೀಜೇಶ್ ಹಾಗೂ ತಂಡ ಗುರುವಾರ ಸಂಜೆ ಪ್ರಭಾಕರನ ಮನೆಯಲ್ಲಿ ತಪಾಸಣೆ ನಡೆಸಿತ್ತು. ಈ ವೇಳೆ ಗೋಡೆ ಕೊರೆದು ಅದರೊಳಗೆ ಬಚ್ಚಿಟ್ಟಿದ್ದ ಕರ್ನಾಟಕ ಹಾಗೂ ಗೋವಾ ಮದ್ಯ, 32,970 ರೂಪಾಯಿಗಳನ್ನು ವಶಪಡಿಸಲಾಗಿತ್ತು. ಪೊಲೀಸರನ್ನು ಕಂಡೊಡನೆ ಪ್ರಭಾಕರ ಮನೆಯಿಂದ ಓಡಿ ಪರಾರಿಯಾಗಿದ್ದನು. ಆರೋಪಿ ಮನೆಯಲ್ಲಿದ್ದಾನೆಂಬ ಮಾಹಿತಿಯ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ತಲುಪಿ ಮನೆಗೆ ಸುತ್ತುವರಿದು ಆರೋಪಿಯನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನೇತೃತ್ವದಲ್ಲಿ ಎಸ್‌ಐ ಕೆ. ಶ್ರೀಜೇಶ್ ಪ್ರೊಬೆಷನ್ ಎಸ್‌ಐ ಆನಂದ ಕೃಷ್ಣನ್, ಪೊಲೀಸರಾದ ಸುಧಾಕರನ್, ರಜೀಶ್, ಬಿಜು, ಫೆಬಿನ್ ಎಂಬಿವರು ಆರೋಪಿಯನ್ನು ಸೆರೆಹಿಡಿದ ತಂಡದಲ್ಲಿದ್ದರು.