ನವದೆಹಲಿ: ರೈಲುಗಳಿಂದ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯಗಳನ್ನು ಭಾರತದ ರಕ್ಷಣಾ ವಲಯ ಸಾಧಿಸಿದೆ. ಇದರಂತೆ ಎರಡುಸಾವಿರ ಕಿಲೋ ಮೀಟರ್ ವ್ಯಾಪ್ತಿ ಹೊಂದಿರುವ ಅಗ್ನಿ ಫ್ರೈಮ್ ಕ್ಷಿಪಣಿಯ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ನೆರವೇರಿಸಲಾಯಿತು. ಈಸಾಧನೆಗೆ ಡಿಆರ್ಡಿಒ ಮತ್ತು ಸಶಸ್ತ್ರ ಪಡೆಗಳನ್ನು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅಭಿನಂದಿಸಿ ದ್ದಾರೆ. ಅಗ್ನಿ ಫ್ರೈಮ್ ಕ್ಷಿಪಣಿಯನ್ನು ರೈಲಿನಿಂದ ಯಶಸ್ವಿ ಯಾಗಿ ಪರೀಕ್ಷಿ ಸಿದ್ದು ಇದೇ ಮೊದಲ ಬಾರಿಯಾಗಿದೆ. ಅದು ಯಶಸ್ವಿಗೊಂಡಿದೆ. ಇದು ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ ನೀಡಿದೆ.
