ಮುಳ್ಳೇರಿಯ: ಬಂಟ ಮಹಿಳಾ ಸಂಘ ಬೆಳ್ಳೂರು ಇದರ 20ನೇ ವಾರ್ಷಿಕೋತ್ಸವದ ಪ್ರಯುಕ್ತ 13ನೇ ಕಾರ್ಯಕ್ರಮವಾದ ಬಂಟ ಅಡುಗೆ ಸ್ಪರ್ಧೆ ಅ. ೧೨ರಂದು ಪಿಂಡಗ ದಿ| ರಾಮ್‌ಮೋಹನ್ ರೈಯವರ ಮನೆಯಲ್ಲಿ ನಡೆಯಲಿದೆ. 10 ಗಂಟೆಗೆ ಸ್ಪರ್ಧೆ ಆರಂಭಗೊಳ್ಳಲಿದೆ. ಕರ್ನಾಟಕ ಧಾರ್ಮಿಕದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ದೀಪ ಪ್ರಜ್ವಲನೆ ನಡೆಸುವರು. ಬಂಟ ಮಹಿಳಾ ಸಂಘ ಬೆಳ್ಳೂರು ಇದರ ಅಧ್ಯಕ್ಷೆ ಡಾ| ವಿದ್ಯಾ ಮೋಹನ್‌ದಾಸ್ ರೈ ಬೆಳ್ಳೂರು ಅಧ್ಯಕ್ಷತೆ ವಹಿಸುವರು. 11.15ರಿಂದ ಮನರಂಜನಾ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 12ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಬಂಟರ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿ ಉದ್ಘಾಟಿಸುವರು. ಬೆಳ್ಳೂರು ಬಂಟರ ಸಂಘದ ಅಧ್ಯಕ್ಷ ಮನಮೋಹನ್ ರೈ ಪಿಂಡಗ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಬಂಟರ ಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಕೆ.ಕೆ. ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸುಬ್ಬಯ್ಯ ರೈ ಮುಖ್ಯ ಅತಿಥಿಗಳಾಗಿರುವರು. ಡಾ| ವಿದ್ಯಾ ಮೋಹನ್‌ದಾಸ್ ರೈ ಪ್ರಾಸ್ತಾವಿಕ ನುಡಿಯುವರು. ಗಣ್ಯರ ಸಹಿತ ಹಲವರು ಭಾಗವಹಿಸುವರು. 1.30ರಿಂದ ಮನರಂಜನಾ ಸ್ಪರ್ಧೆ ಮುಂದುವರಿಯಲಿದೆ.