ಮಂಜೇಶ್ವರ: ಶಬರಿಮಲೆ ಕ್ಷೇತ್ರದಲ್ಲಿ ನಡೆಸಿದ ಚಿನ್ನ ಕಳ್ಳತನದ ಹೆಗ್ಗಣಗಳ ವಿರುದ್ಧ ಹಾಗೂ ಮತ ಕಳ್ಳತನ ವಿರುದ್ಧ ಕಲ್ಲಿಕೋಟೆಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಂಗಮ ನಡೆಸಲಿದೆಯೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ರಮೇಶನ್ ಕರುವಾಚ್ಚೇರಿ ತಿಳಿಸಿದ್ದಾರೆ. ಹೊಸಂಗಡಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಟನಾ ಸಂಗಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸು ವರೆಂದು ಅವರು ತಿಳಿಸಿದರು. ಕೇಂದ್ರದ ಬಿಜೆಪಿ ಸರಕಾರ ಮತಕಳ್ಳತನ ನಡೆಸಿದರೆ, ರಾಜ್ಯ ಸರಕಾರ ಚಿನ್ನ ಕಳ್ಳತನ ನಡೆಸುತ್ತದೆಯೆಂದು ಆಪಾದಿಸಿದ ಅವರು ಈ ಎರಡೂ ಪಕ್ಷಗಳು ಪರಸ್ಪರ ಹೊಂದಾಣಿಕೆ ನಡೆಸುತ್ತಿದೆಯೆಂದು ಆರೋಪಿಸಿದರು. ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಎಂ.ಸಿ. ಪ್ರಭಾಕರನ್, ಸೋಮಶೇಖರ್ ಜೆ.ಎಸ್, ಶಾಂತ ಆರ್ ನಾಯ್ಕ್, ಗೀತಾ ಬಂದ್ಯೋಡು, ಅರ್ಜುನನ್ ತಾಯಲಂಗಾಡಿ, ಹನೀಫ್ ಪಡಿಂಞ್ಞಾರ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ದಾಮೋದರ, ನಾಗೇಶ್ ಮಂಜೇಶ್ವರ, ಝಕರಿಯ, ಮೊಹಮ್ಮದ್ ಮಜಾಲ್, ಫಾರೂಕ್ ಶಿರಿಯ, ಸತ್ಯನ್ ಸಿ ಉಪ್ಪಳ, ಅಹ್ಮದ್ ಮನ್ಸೂರ್, ಗುರುವಪ್ಪ ಮಂಜೇಶ್ವರ, ಬರ್ನಾಡ್ ಡಿ ಅಲ್ಮೇಡಾ, ವಸಂತ ರಾಜ್ ಶೆಟ್ಟಿ, ಸೀತಾ ಡಿ, ಮೊಹಮ್ಮದ್ ಜೆ, ರಂಜಿತ್ ಮಂಜೇಶ್ವರ, ಹುಸೈನ್ ಕುಬಣೂರು, ಕೆ.ಎಸ್. ಗಂಗಾಧರ್, ಬಾಸಿತ್ ತಲೆಕ್ಕಿ, ರಾಜೇಶ್ ನಾಯ್ಕ್ ಹೇರೂರು, ಇರ್ಷಾದ್ ಮಂಜೇಶ್ವರ, ಶಾಫಿ ತಲೇಕಳ, ಬಾಲಕೃಷ್ಣ ಕುಲಾಲ್ ಉಪಸ್ಥಿತರಿದ್ದರು. ದಿವಾಕರ್ ಎಸ್.ಜೆ ಸ್ವಾಗತಿಸಿ, ಗಣೇಶ್ ಪಾವೂರು ವಂದಿಸಿದರು.
