ಬದಿಯಡ್ಕ ಪಂ.ನಲ್ಲಿ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರ ಹಣ ಲಪಟಾವಣೆ: ನಾಗರಿಕರಿಂದ ಪ್ರತಿಭಟನೆ

ನೀರ್ಚಾಲು: ಬದಿಯಡ್ಕ ಪಂಚಾ ಯತಿನ 17ನೇ ವಾರ್ಡ್ ನ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಸಂಗ್ರಹಿಸಿದ ಹಣ ಲಪಟಾಯಿಸಿ ಭಾರೀ ಭ್ರಷ್ಟಾಚಾರ ಮಾಡಿದ ಬಗ್ಗೆ ಪಂಚಾಯತ್ ಆಡಿಟ್‌ನಲ್ಲಿ ವ್ಯಕ್ತವಾಗಿದ್ದು ಈ ಭ್ರಷ್ಟಾಚಾರಿಗಳ ಹಗರಣದ ತನಿಖೆ ಆದಷ್ಟು ಬೇಗ ಕೈಗೆತ್ತಿಕೊಂಡು ಇವರನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಏಣಿಯರ್ಪು ಹನುಮಾನ್ ನಗರದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು. ಬ್ಲಾಕ್ ಪಂಚಾಯತು ಸದಸ್ಯೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಮಂಡಲ ಕಾರ್ಯದರ್ಶಿ ರಜನಿ ಸಂದೀಪ್, ವಾರ್ಡು ಪ್ರತಿನಿಧಿ ಸ್ವಪ್ನ, ಪುನೀತ್, ಉಮೇಶ ಸಹಿತ ಹಲವರು ನೇತೃತ್ವ ವಹಿಸಿದರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page